ಶಿರ್ವ: ಗಾಂಜಾ ಮಾರಾಟಕ್ಕೆ ಯತ್ನ- ಮೂವರು ವಶ

ಶಿರ್ವ ಜೂ.18(ಉಡುಪಿ ಟೈಮ್ಸ್ ವರದಿ) :ಕುರ್ಕಾಲು ಗ್ರಾಮದ ಬಗ್ಗೇಡಿಗುತ್ತು ಎಂಬಲ್ಲಿ ಮಾರಾಟಕ್ಕಾಗಿ ಗಾಂಜಾವನ್ನು ಹೊಂದಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ‌ ಶಿರ್ವ ಠಾಣಾ ಪೊಲೀಸರು ನಿನ್ನೆ ಮಧ್ಯಾಹ್ನದ ವೇಳೆ  ಕುರ್ಕಾಲು ಗ್ರಾಮದ ಬಗ್ಗೇಡಿಗುತ್ತು ನಾಗಬ್ರಹ್ಮಸ್ಥಾನದ ಸಮೀಪದ ಸ್ಥಳಕ್ಕೆ ತೆರಳಿ ಆಪಾದಿತರಾದ ಪ್ರೇಮನಾಥ್‌ ಯಾನೆ ರೇವ್‌, ಸಂಪತ್ ಬಂಗೇರ ಮತ್ತು ಮುದಸ್ಸಿರ ಎಂಬವರನ್ನು ವಶಕ್ಕೆ ಪಡೆದು ಪ್ರೇಮನಾಥ್‌ ಯಾನೆ ರೇವ್‌ ಎಂಬಾತನ ವಶದಲ್ಲಿದ್ದ ಅಂದಾಜು 5000 ರೂ. ಮೌಲ್ಯದ 142.92 ಗ್ರಾಂ ಮಾದಕ ವಸ್ತು, 4 ಮೊಬೈಲ್, 500 ರೂ. ನಗದು, ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ ಒಂದು ಕಾರು, ಒಂದು ದ್ವಿಚಕ್ರ ವಾಹನ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!