ಹೆಬ್ರಿ: ಟಿಪ್ಪರ್ ಲಾರಿ- ಕ್ಯಾಂಟರ್ ಅಪಘಾತ- ಚಾಲಕ ಮೃತ್ಯು
ಹೆಬ್ರಿ ಜೂ.18(ಉಡುಪಿ ಟೈಮ್ಸ್ ವರದಿ):ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿನ ತಿರುವಿನಲ್ಲಿ ಟಿಪ್ಪರ್ ಲಾರಿಗೆ ಈಚರ್ ಕ್ಯಾಂಟರ್ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.
ಈಚರ್ ಕ್ಯಾಂಟರ್ ವಾಹನದ ಚಾಲಕ ಬಾಲಕೃಷ್ಣ ಜಿ ಮೃತಪಟ್ಟವರು. ನಿನ್ನೆ ಸಂಜೆ ವೇಳೆ ಚಾಲಕ ಅರುಣ್ ಎಂಬಾತ ಶಿವಪುರದಲ್ಲಿ ತನ್ನ ಟಿಪ್ಪರ್ ಲಾರಿಯಲ್ಲಿ ಜಲ್ಲಿ ಲೋಡ್ ಮಾಡಿಕೊಂಡು ಅಗುಂಬೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿನ ತಿರುವಿನ ಬಳಿ ತಲುಪಿದಾಗ ಅಗುಂಬೆ ಕಡೆಯಿಂದ ಬಂದ ಈಚರ್ ಕ್ಯಾಂಟರ್ ವಾಹನದ ಚಾಲಕ ಬಾಲಕೃಷ್ಣ ಜಿ ಎಂಬಾತ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ಎರಡು ವಾಹನ ಚಾಲಕರು ಅಪಘಾತ ಅಗುವುದನ್ನು ತಪ್ಪಿಸಲು ಯಾವುದೇ ಪ್ರಯತ್ನವನ್ನು ಮಾಡದ ಕಾರಣ ಎರಡೂ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಈಚರ್ ಕ್ಯಾಂಟರ್ ವಾಹನದ ಮುಂದಿನ ಕ್ಯಾಬೀನ್ ಭಾಗವು ಸಂಪೂರ್ಣ ಜಖಂ ಅಗಿ ಚಾಲಕ ಬಾಲಕೃಷ್ಣ ಜಿ ಅವರು ಗಂಭೀರ ಗಾಯಗೊಂಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಅವರನ್ನು ಚಿಕಿತ್ಸೆಗಾಗಿ ಹೆಬ್ರಿ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.