ಲವ್ ಜಿಹಾದ್ ಹಿಂದೂ ಮತ್ತು ಕ್ರೈಸ್ತ ಸಮುದಾಯದ ಮೇಲೆ ಆಗುತ್ತಿರುವ ಭಯೋತ್ಪದಾನೆ ಇನ್ನೊಂದು ಮುಖ; ಶೋಭಾ ಕರಂದ್ಲಾಜೆ

ತಿರುವನಂತಪುರಂ: ಲವ್ ಜಿಹಾದ್ ಎಂಬುದು ಹಿಂದೂ ಮತ್ತು ಕ್ರೈಸ್ತ ಸಮುದಾಯಗಳ ಮೇಲೆ ನಡೆಸಲಾಗುತ್ತಿರುವ ಭಯೋತ್ಪಾದನೆಯ ಇನ್ನೊಂದು ಮುಖ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮಾಧ್ಯಮದಲ್ಲಿ ಪ್ರಕಟಗೊಂಡಿರುವ ವರದಿ ಪ್ರಕಾರ ಸಂಸದೆ ಶೋಭಾ ಕಂದ್ಲಾಜೆ ಅವರು, ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕೇರಳ ರಾಜ್ಯ ಸರ್ಕಾರವು ಲವ್ ಜಿಹಾದ್ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸಂಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದೂ ವರದಿಯಾಗಿದೆ.


ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 2011ರಿಂದ 2016ರವರೆಗೆ ಕೇರಳದಲ್ಲಿ 5,673 ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಈ ಪೈಕಿ 1643 ಮಂದಿ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಅಲ್ಲದೆ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರ ಶಬರಿಮಲೆ ವಿರುದ್ಧ ನಿಲುವು ತಳೆದಾಗ ಬಿಜೆಪಿ ಮಾತ್ರವೇ ಧ್ವನಿಯೆತ್ತಿತು ಮತ್ತು ಭಕ್ತರ ಪರವಾಗಿ ಬೀದಿಗಿಳಿಯಿತು. ಕೇರಳದಲ್ಲಿ ಬಿಜೆಪಿಯ ಸಚಿವಾಲಯ ಹಾಗೂ ಶಾಸಕಾಂಗ ಹಿಂದೂಗಳ ಪರವಾಗಿ ಮಾತನಾಡಲು ಬರಬೇಕಾದರೆ, ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆ. ಇದರೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಪೌರತ್ವ ಮಸೂದೆ, ಮುತಾಲಕ್ ಕಾಯ್ದೆಗಳನ್ನು ಬಿಜೆಪಿ ತಂದಿದೆ. ಬಿಜೆಪಿ ಸರ್ಕಾರವು ದೇಶಾದ್ಯಂತ ಬರಲು ಪ್ರಯತ್ನ ಮಾಡಬೇಕೆಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!