ಮಲ್ಪೆ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ತಂಡದಿಂದ ಹಲ್ಲೆ
ಮಲ್ಪೆ ಜೂ.17(ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಡು ತೋನ್ಸೆ ಗ್ರಾಮದ ಜಯ ಅವರು ನಿನ್ನೆ ಸಂಜೆ ಎಂದಿನಂತೆ ವಾಯು ವಿಹಾರಕ್ಕಾಗಿ ತೊಟ್ಟಂ ಪೊಟ್ಟಳ ಎಂಬಲ್ಲಿಗೆ ಬಂದು ಕುಳಿತಿರುವಾಗ ಆರೋಪಿಗಳಾದ ಕೀರ್ತನ್ ಮತ್ತು ಇತರೆ 5 ಜನ ಅಕ್ರಮ ಕೂಟ ಕಟ್ಟಿಕೊಂಡು ಜಯ ಅವರ ಬಳಿ ಬಂದು ಸಿಗರೇಟ್ ಕೇಳಿದ್ದರು. ಈ ವೇಳೆ ಅವರು ನಾನು ಸಿಗರೇಟ್ ಸೇದುವುದಿಲ್ಲ ಎಂದು ಹೇಳಿದ್ದಕ್ಕೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿದ್ದಾರೆ. ಅಲ್ಲದೆ ಜಯ ಅವರು ಆರೋಪಿತರಿಂದ ತಪ್ಪಿಸಿಕೊಂಡರೂ ಅವರನ್ನು ಹಿಂಬಾಲಿಸಿದ ಆರೋಪಿಗಳು ಮತ್ತೆ ಗಾಜಿನ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಜಯ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.