ಮಣಿಪಾಲ: ಓರ್ವ ವಿದ್ಯಾರ್ಥಿ ಸೇರಿ ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ

ಮಣಿಪಾಲ ಜೂ.14(ಉಡುಪಿ ಟೈಮ್ಸ್ ವರದಿ):  ಹೆರ್ಗಾ ಗ್ರಾಮದ ಅಪಾರ್ಟ್ಮೆಂಟ್‌ ಮೇಲೆ ದಾಳಿ ಮಾಡಿದ ಮಣಿಪಾಲ ಠಾಣಾ ಪೊಲೀಸರು ಓರ್ವ ವಿದ್ಯಾರ್ಥಿ ಸಹಿತ ಮೂರು ಜನ ಗಾಂಜಾ ಪೆಡ್ಲರ್‌ಗಳನ್ನು ಬಂಧಿದ್ದಾರೆ.

ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ ಮಣಿಪಾಲದ ಎಂ.ಐ.ಟಿ ವಿದ್ಯಾರ್ಥಿ ಶಶಾಂಕ (25) ಹಾಗೂ ಆತನ ಜೊತೆಯಿದ್ದ ಕಾರ್ಕಳದ ಫೆಡ್ಲರ್‌‌ಗಳಾದ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ  ಆದ ಆದಿಲ್‌ (36) ನನ್ನು ಬಂಧಿಸಿ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿ ಆದಿಲ್‌ ನೀಡಿದ ಮಾಹಿತಿಯ ಮೇಲೆ ಹಿರಿಯಡ್ಕ –ಕಾರ್ಕಳ ರಸ್ತೆಯಲ್ಲಿ ನೌಶದ್‌ (27) ನನ್ನು ಹಾಗೂ ಆತನ ಬಳಿ ಇದ್ದ  1 ಕೆಜಿ 100 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. 

ಪ್ರಕರಣದ ವಿಚಾರಣೆ ವೇಳೆ ಆದಿಲ್‌ ಮತ್ತು ನೌಶದ್‌ ಎಂಬ ಗಾಂಜಾ ಪೆಡ್ಲರ್‌ಗಳು ಆತನ ಸ್ನೇಹಿತ ಓಮನ್‌ ದೇಶದ ಮಸ್ಕತ್‌ನಲ್ಲಿ ವಾಸವಿದ್ದ ಕಾರ್ಕಳ ಮೂಲದ ಇಮ್ರಾನ್‌ ಖಾನ್‌ ಯಾನೆ ಶಕೀಲ್‌‌ನನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ  ಅಲ್ಲಿಂದ ನೌಶದ್‌ ಮತ್ತು ಆದಿಲ್‌ನನ್ನು ಸಂಪರ್ಕಿಸಿದಾಗ ಕಾಸರಗೋಡಿನ ಉಪ್ಪಾಳದಿಂದ ಗಾಂಜಾ ಮಾರಟ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ. ಪ್ರಕರಣದ ಮುಖ್ಯ ಆರೋಪಿ ಇಮ್ರಾನ್‌ ಖಾನ್‌ ನ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಮಣಿಪಾಲ ಪೊಲೀಸ್‌ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆತನ ವಿರುದ್ಧ ಲುಕ್‌ ಔಟ್‌ ನೋಟೀಸ್‌ (ಎಲ್‌ಓಸಿ) ಹೊರಡಿಸಲು ಸೂಚಿಸಿದ್ದರು. ಈ  ಪ್ರಕರಣದಲ್ಲಿ ಓರ್ವ ವಿದ್ಯಾರ್ಥಿ ಪೆಡ್ಲರ್‌ ಸೇರಿದಂತೆ  ಮೂರನ್ನು ಬಂಧಿಸಿ  ಸುಮಾರು 75,000 ರೂ.  ಮೌಲ್ಯದ 1.5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  

ಒಂದು ವಾರದ ಹಿಂದೆ ಆದಿ ಉಡುಪಿಯ ಸುಮನ್‌ ಶೆಟ್ಟಿಗಾರ್‌ (25) ಎಂಬಾತನನ್ನು ಬಂಧಿಸಿ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು .ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆದಿದ್ದು ,ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣವನ್ನು ಉಡುಪಿ ಜಿಲ್ಲಾ  ಪೊಲೀಸ್  ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ ಅವರ ತಂಡದ ಸದಸ್ಯರಾದ ಉಡುಪಿ ಡಿ.ವೈ.ಎಸ್.ಪಿ ದಿನಕರ ಕೆ.ಪಿ, ಮಣಿಪಾಲ ಠಾಣೆಯ ಪೊಲೀಸ್‌ ನಿರೀಕ್ಷಕ ದೇವರಾಜ ಟಿ.ವಿ, ಠಾಣಾ ಸಿಬ್ಬಂದಿಗಳಾದ ಎ.ಎಸ್‌.ಐ ಶೈಲೇಶ್‌ ಕುಮಾರ್‌, ಹೆಚ್.ಸಿ. ಸುಕುಮಾರ್ ಶೆಟ್ಟಿ, ಹೆಚ್.ಸಿ. ಅಬ್ದುಲ್‌ ರಜಾಕ್, ಹೆಚ್ ಸಿ ಇಮ್ರಾನ್ , ಪಿ.ಸಿ ಚೆನ್ನೇಶ್ , ಪಿಸಿ ಆನಂದಯ್ಯ ರವರ ತಂಡ ಭಾಗವಹಿಸಿದೆ.

Leave a Reply

Your email address will not be published. Required fields are marked *

error: Content is protected !!