ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 130ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ
ಉಡುಪಿ ಜೂ.13(ಉಡುಪಿ ಟೈಮ್ಸ್ ವರದಿ): ಉಡುಪಿ ನಗರವನ್ನು ನೂರು ಶೇಕಡ ವಿದ್ಯುತ್ ಹೊಂದಿದ ದೇಶದ ಮೊಟ್ಟಮೊದಲ ನಗರವನ್ನಾಗಿ ಮಾಡುವಲ್ಲಿ ದಾಪುಗಾಲು ಇಡುತ್ತಿರುವ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಇವರ ನೇತ್ರತ್ವದಲ್ಲಿ ಉಡುಪಿ ನಗರದ ಸುಬ್ರಹ್ಮಣ್ಯ ನಗರ ವಾರ್ಡಿನ ದಲಿತ ಸಮುದಾಯದ ಶಾಂತ, ಮತ್ತು ಸುಮಿತ್ರ ಇವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು.
ದಾನಿಗಳಾದ ಉಡುಪಿ ಮೂಲದ ಗೋವಾದ ಉದ್ಯಮಿ ಹರೀಶ ಕಲ್ಕೂರ, ಮತ್ತು ಸುಮಾ ಹರೀಶ್ ಕಲ್ಕೂರ ಇವರು ಉಚಿತ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿ ಮನೆಯವರಿಗೆ ಪಾತ್ರೆ ಬಟ್ಟೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ನಗರ ವಾರ್ಡಿನ ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ಮಾಜಿ ನಗರ ಸಭಾ ಸದಸ್ಯೆ ಸುಬೇದ, ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ಟ್ರಸ್ಟಿನ ಸದಸ್ಯೆ ವಿದ್ಯಾಶಾಮ್ ಸುಂದರ್, ಶ್ರೀನಿವಾಸ್ ರಾವ್ ರಾಜಾರಾಮ್, ಸುರೇಶ್ ಪೂಜಾರಿ, ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಇದುವರೆಗೆ ಟ್ರಸ್ಟ್ ವತಿಯಿಂದ ಉಡುಪಿ ನಗರದ 130 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ.