ಕಾಪು: ಮಹಿಳೆಯ 1.80 ಲ.ರೂ ಮೌಲ್ಯದ ಚಿನ್ನದ ಸರ ಸುಲಿಗೆ
ಕಾಪು ಜೂ.13(ಉಡುಪಿ ಟೈಮ್ಸ್ ವರದಿ): ತಾಲೂಕಿನ ಪಡು ಗ್ರಾಮದ ದರ್ಖಾಸು ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಧರಿಸಿದ್ದ 1.80 ಲ.ರೂ. ಮೌಲ್ಯದ ಚಿನ್ನದ ಸರಗಳನ್ನು ಬೈಕಿನಲ್ಲಿ ಬಂದ ಇಬ್ಬರು ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪುವಿನ ಪಡು ಗ್ರಾಮದ ಶಕುಂತಳ ಜಿ ಭಟ್ ಅವರು ನಿನ್ನೆ ತಮ್ಮ ಪರಿಚಯದವರ ಮದುವೆ ಕಾರ್ಯಕ್ರಮಕ್ಕೆಂದು ಪಾಜಕಕ್ಕೆ ಹೋಗಿ ಮದುವೆ ಮುಗಿಸಿ ವಾಪಸ್ಸು ತೆರಳುವ ವೇಳೆ ಮಂಗಳೂರು ಉಡುಪಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಪಡುಗ್ರಾಮದ ಸೆಂಚುರಿ ಹಾರ್ಡ್ವೇರ್ ಬಳಿ ಹೋಗಿದ್ದು, ಅಲ್ಲಿ ಕೆಲಸ ಮಾಡುವ ಅಂಗಡಿಯಾತ ಕೊಡಬೇಕಾಗಿದ್ದ ಹಣವನ್ನು ಕೊಟ್ಟಿದ್ದು ಅದನ್ನು ತೆಗೆದುಕೊಂಡು ಮನೆಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಪುವಿನ ಪಡು ಗ್ರಾಮದ ದರ್ಖಾಸು ಬಳಿ ಹಿಂದಿನಿಂದ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಶಕುಂತಲಾ ಜಿ.ಭಟ್ ಅವರು ಧರಿಸಿದ್ದ 1.80 ಸಾವಿರ ರೂ. ಮೌಲ್ಯದ ಚಿನ್ನದ ಸರಗಳನ್ನು ಸುಲಿಗೆ ಮಾಡಿಕೊಂಡು ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.