ಉಡುಪಿ: ಕಾರು ಡಿಕ್ಕಿ ಪಾದಚಾರಿ ಮೃತ್ಯು
ಉಡುಪಿ ಜೂ.10( ಉಡುಪಿ ಟೈಮ್ಸ್ ವರದಿ): ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ಗ್ರಾಮ ಅಂಬಾಗಿಲು ಬಳಿ ನಡೆದಿದೆ.
ಪುತ್ತೂರು ಗ್ರಾಮದ ಶಂಕರ ಬಿ ಆಚಾರ್ಯ (58) ಮೃತಪಟ್ಟವರು. ಇವರು ನಿನ್ನೆ ಬೆಳಗ್ಗಿನ ಜಾವ ಪುತ್ತೂರು ಗ್ರಾಮದ ಅಂಬಾಗಿಲುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಾ ಡಿವೈಡರ್ ಬಳಿ ಇರುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಅದರ ಚಾಲಕ ರಸ್ತೆ ದಾಟುತ್ತಿದ್ದ ಶಂಕರ ಬಿ ಆಚಾರ್ಯ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಶಂಕರ ಬಿ ಆಚಾರ್ಯ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ವಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.