ಡಾ.ಅವನೀಂದ್ರನಾಥ್ ರಾವ್ ಅವರ ಗ್ರಂಥಸೂಚಿ ಬಿಡುಗಡೆ

ಉಡುಪಿ ಜೂ.8(ಉಡುಪಿ ಟೈಮ್ಸ್ ವರದಿ): ಕೇಂದ್ರ ಸಚಿವಾಲಯ ಗ್ರಂಥಾಲಯದ ಹಿರಿಯ ಅಧಿಕಾರಿ, ದೆಹಲಿ ಶಿಕ್ಷಣ ಕನ್ನಡ ಸಂಸ್ಥೆಯ ಉಪಾಧ್ಯಕ್ಷ ಡಾ.ಅವನೀಂದ್ರನಾಥ್ ರಾವ್ ಅವರು ಸಂಕಲಿಸಿದ ವಸ್ತು ಸಂಗ್ರಹಾಲಯ ಕುರಿತ ಸಚಿತ್ರ ಗ್ರಂಥ ಸೂಚಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ಜಿ. ರೆಡ್ಡಿ ಅವರು ಬಿಡುಗಡೆಗೊಳಿಸಿದರು.

ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಿದ ವಸ್ತು ಸಂಗ್ರಹಾಲಯ ಕುರಿತ ಜಾಗತಿಕ ಮಹಾಮೇಳ ಇಂಟರ್‌ನ್ಯಾಷನಲ್ ಮ್ಯೂಸಿಯಂ ಎಕ್ಷ್‌ಪೊ-2023 ವಿಶೇಷ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಅವನೀಂದ್ರನಾಥ್ ಅವರು  ‘ಮ್ಯೂಸಿಯಂ ಬುಕ್ ಕವರ್’ ಪ್ರದರ್ಶನದ ಪ್ರಧಾನ ಅಧಿಕಾರಿಯಾಗಿದ್ದರು.

ಕೊಲ್ಕತ್ತದ ಕೇಂದ್ರ ಗ್ರಂಥಾಲಯ  ಈ ವಿಶೇಷ ಗ್ರಂಥಸೂಚಿಯನ್ನು ಪ್ರಕಟಿಸಿದ್ದು, ದೇಶ ವಿದೇಶಗಳ ವಿವಿಧ ವಸ್ತು ಸಂಗ್ರಹಾಲಯಗಳು ಪ್ರದರ್ಶನ ನೀಡಿದ ಪ್ರಥಮ ಮ್ಯೂಸಿಯಂ ಎಕ್ಷಪೊ ಇದಾಗಿದ್ದು, ವಿವಿಧ ರಾಜ್ಯಗಳ ಸಂಸ್ಕೃತಿ ಮಂತ್ರಿಗಳು ಇಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!