ಕುಂದಾಪುರ: ಫಿಶ್ ಎಕ್ಸ್‌ಪೋರ್ಟ್ ಕಂಪೆನಿಗೆ ಲಕ್ಷಾಂತರ ರೂ. ವಂಚನೆ
ಕುಂದಾಪುರ ಜೂ.8(ಉಡುಪಿ ಟೈಮ್ಸ್ ವರದಿ): ಕುಂದಾಪುರದ ಫಿಶ್ ಸ್ಟೋರೇಜ್ ಮತ್ತು ಫಿಶ್ ಎಕ್ಸ್‌ಪೋರ್ಟ್ ಕಂಪೆನಿಗೆ ಆರೋಪಿಯೋರ್ವ ಮೀನು ರಫ್ತು ನೆಪದಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕುಂದಾಪುರದ ದೇವಲ್ಕುಂದ ಗ್ರಾಮದಲ್ಲಿರುವ ಮಲ್ಪೆ ಫ್ರೆಶ್ ಮರೇನ್ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಸ್ಟೋರೇಜ್ ಮತ್ತು ಫಿಶ್ ಎಕ್ಸ್‌ಪೋರ್ಟ್ ಪ್ಯಾಕ್ಟರಿಯಲ್ಲಿ ಚೀಪ್ ಅಕೌಂಟೆಂಟ್ ರತ್ನಾಕರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಇಲಿಯಾಸ್ ವಜೀರ್ ಬಾಯ್ ಗುಜರಾತ್ ಎಂಬಾತ ಸೂಚಿಸಿದ ಕಂಪೆನಿಯವರಿಗೆ ಫಿಶ್‌ನ್ನು ಕಳುಹಿಸಿಕೊಡುತ್ತಿದ್ದು ಫಿಶ್‌ನ್ನು ಖರೀದಿಸಿದ ಹಣವನ್ನು ಖರೀದಿಸಿದ ಕಂಪೆನಿಯವರು ಪ್ಯಾಕ್ಟರಿಯ ಬ್ಯಾಂಕ್ ಅಕೌಂಟ್‌ಗೆ ವರ್ಗಾಯಿಸುತ್ತಿದ್ದರು.
ಈ ನಡುವೆ 2021 ರ ಆ.12 ರಂದು ಆರೋಪಿಯು ಚೈನಾದ ಪುಜಿಯನ್ ಪ್ರವಿನ್ಸ್ ಚೂಸನ್ ಇಂಪೋರ್ಟ್ & ಎಕ್ಸ್‌ಪೋರ್ಟ್ ಟ್ರೇಡ್ ಕಂಪನಿ ಲಿಮಿಟೆಡ್‌ಗೆ 4 ಕಂಟೇನರ್ ಫಿಶ್‌ನ್ನು ಕಳುಹಿಸಿಕೊಡುವಂತೆ ಇ-ಮೇಲ್‌ಮುಖಾಂತರ ಆರ್ಡರ್ ಕಳುಹಿಸಿದ್ದನು. ಅದರಂತೆ ರತ್ನಾಕರ ಅವರು 2021 ರ ಸೆ.10 ರಂದು 1,03,670 ಕೆ.ಜಿ ಫಿಶ್‌ನ್ನು ಹಡಗಿನಲ್ಲಿ ಚೈನಾದ ಪುಜಿಯನ್ ಪ್ರವಿನ್ಸ್ ಚೂಸನ್ ಇಂಪೋರ್ಟ್ & ಎಕ್ಸ್‌ಪೋರ್ಟ್ ಟ್ರೇಡ್ ಕಂಪನಿ ಲಿಮಿಟೆಡ್‌ಗೆ ಕಳುಹಿಸಿಕೊಟ್ಟಿದ್ದರು. ಅದರ 1,33,68,712 ರೂಪಾಯಿಗಳನ್ನು ಕೊಡಬೇಕಾಗಿದ್ದು ಫಿಶ್‌ನ್ನು ಖರೀದಿಸಿದ ಕಂಪೆನಿಯವರು ಪ್ಯಾಕ್ಟರಿಯ ಬ್ಯಾಂಕ್‌ಅಕೌಂಟ್‌ಗೆ 2021 ರ ಅ.22 ರಂದು 53,91,036 ರೂಪಾಯಿ ಹಾಗೂ 2022 ರ ಫೆ.22 ರಂದು 64,62,840 ರೂಪಾಯಿಗಳನ್ನು ಪಾವತಿಸಿದ್ದು ಬಾಕಿ ಉಳಿದ ಹಣ 16,65,594 ರೂಪಾಯಿಗಳನ್ನು ತುಂಬಾ ಸಮಯದಿಂದ ಕೊಟ್ಟಿರುವುದಿಲ್ಲ. ಈ ಬಗ್ಗೆ ಆರೋಪಿಯಲ್ಲಿ ವಿಚಾರಿಸಿದಾಗ ಸರಿಯಾಗಿ ಸ್ಪಂದನೆ ನೀಡಿರುವುದಿಲ್ಲ. ಹಾಗೂ ಫಿಶ್ ಖರೀದಿಸಿದ ಕಂಪನಿಗೂ ಮಾರಾಟ ಮಾಡಿದ ಪ್ಯಾಕ್ಟರಿಯವರಿಗೂ ನೇರ ಸಂಪರ್ಕ ಇಲ್ಲದೇ ಇರುವುದರಿಂದ ಆರೋಪಿಯಲ್ಲಿ ಚೈನಾದ ಪುಜಿಯನ್ ಪ್ರವಿನ್ಸ್ ಚೂಸನ್ ಇಂಪೋರ್ಟ್ & ಎಕ್ಸ್‌ಪೋರ್ಟ್ ಟ್ರೇಡ್‌ಕಂಪನಿ ಲಿಮಿಟೆಡ್‌ನ ದೂರವಾಣಿ ನಂಬರ್ ಮತ್ತು ಕಂಪೆನಿಯವರನ್ನು ಸಂಪರ್ಕ ಮಾಡಿಕೊಡಲು ಕೇಳಿಕೊಂಡಲ್ಲಿ ಆರೋಪಿಯು ಒಪ್ಪಿಕೊಂಡಿರುವುದಿಲ್ಲ. ಆದ್ದರಿಂದ ಆರೋಪಿಯು ಪ್ಯಾಕ್ಟರಿಯವರನ್ನು ನಂಬಿಸಿ ವ್ಯವಹಾರ ಮಾಡಿ ಪ್ಯಾಕ್ಟರಿಗೆ ಬರಬೇಕಾದ ಬಾಕಿ ಹಣವನ್ನು ನೀಡದೇ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.