ಅಡುಗೆ ಅನಿಲ 20ರೂ. ಏರಿಕೆಯಾದಾಗ ಪ್ರತಿಭಟಿಸಿದ ಶೋಭಾ ಕರಂದ್ಲಾಜೆ ಈಗೇಕೆ ಮೌನದಲ್ಲಿದ್ದೀರಿ: ಸೊರಕೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವ ಜನಧ್ವನಿ ಪಾದಯಾತ್ರೆಯ ಸಮಾರೋಪ ಸಭೆ 80 ಬಡಗು ಬೆಟ್ಟುವಿನಲ್ಲಿ ನಡೆಯಿತು.
ಈ ವೇಳೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, 80 ಬಡಗಬೆಟ್ಟುವಿನಲ್ಲಿ ಕಳೆದ 25 ವರ್ಷದಿಂದ ಬಿಜೆಪಿ ಆಳ್ವಿಕೆ ಮಾಡುತ್ತಿದೆ. ಆದರೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಹಾಗೂ ಯೋಜನೆಗಳು ಮನೆಗಳನ್ನು ತಲುಪಿದೆ. ಇಲ್ಲಿ ಕಾಂಗ್ರೆಸ್ ಸಕ್ರಿಯವಾಗಿಲ್ಲದಿದ್ದರೂ ಈ ಬಾರಿ ಚುನಾವಣೆಯಲ್ಲಿ ಸಾರ್ವಜನಿಕರು ಕಾಂಗ್ರೆಸ್ ಗ್ರಾ.ಪಂ. ಅಭ್ಯರ್ಥಿಗಳಿಗೆ ಶೇ. 45ರಷ್ಟು ಮತ ಹಾಕುವ ಮೂಲಕ ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ ಎಂದು ತಿಳಿಸಿದದರು.
ನಾನು ಲೋಕಸಭೆ ಸದಸ್ಯನಾಗಿದ್ದ ಸಂದರ್ಭದಲ್ಲಿ ಸ್ವಜಲಧಾರೆ ಕಾರ್ಯಕ್ರಮ ಜಾರಿಗೊಳಿಸಿ, ಗ್ರಾಮದ ಮನೆ ಮನೆಗೆ ಕುಡಿಯುವ ನೀರಿನ ನಳ್ಳಿಯ ಸಂಪರ್ಕ ಕಲ್ಪಿಸಲಾಗಿತ್ತು. ಶೇ.70ರಷ್ಟು ಕುಟುಂಬಗಳ ಬಿಪಿಎಲ್ ಕಾರ್ಡ್ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ ಸರಕಾರ ಇರುವ ಸಂದರ್ಭದಲ್ಲಿ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಈ ಜನವಿರೋಧಿ ನೀತಿ ಗಳಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ ಎಂದರು.
ಇದೇ ವೇಳೆ ಮಾತು ಮುಂದುವರೆಸಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲದ ಮೇಲೆ 20 ರೂ. ಏರಿಕೆಯಾದಾಗ ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರತಿಭಟನೆ ನಡೆಸಿದ್ದರು. ಪ್ರಸ್ತುತ ಸಿಲಿಂಡರ್ ಬೆಲೆ 1,000 ರೂ.ಗೆ ಸಮೀಪಿಸುತ್ತಿದ್ದರೂ ಮೌನವಾಗಿದ್ದಾರೆ. ಪೆಟ್ರೋಲ್, ನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಬಡವರ ಹಾಗೂ ಮಧ್ಯಮ ವರ್ಗದ ಜೀವನ ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಜನಧ್ವನಿ ಜಾಗೃತಿ ಪಾದಯಾತ್ರೆ ಪೆರ್ಡೂರಿನಿಂದ 80 ಬಡಗಬೆಟ್ಟು ವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಚಿಂತಕ ಹರ್ಷ ಕುಮಾರ್ ಕುಗ್ವೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ರಮೇಶ್ ಕಾಂಚನ್, ಜನಾರ್ದನ ಭಂಡಾರ್ ಕರ್, ಹರೀಶ್ ಕಿಣಿ, ಶಾಂತರಾಮ ಸೂಡ, ನವೀನ್ ಚಂದ್ರ ಸುವರ್ಣ, ನೀರೆ ಕೃಷ್ಣ ಶೆಟ್ಟಿ ನಾಗೇಶ್ ಉದ್ಯಾವರ, ಇಸ್ಮಾಯಿಲ್, ರೋಶನಿ ಒಲಿವೆರಾ, ಡಾ. ಸುನೀತಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಲಕ್ಷ್ಮೀ ನಾರಾಯಣ ಪ್ರಭು, ಸಂಧ್ಯಾ ಶೆಟ್ಟಿ, ದೀಪಕ್ ಕೋಟ್ಯಾನ್, ಸೌರಬ್ ಬಲ್ಲಾಳ್, ನವೀನ್ ಚಂದ್ರ ಶೆಟ್ಟಿ, ಶ್ರೀಪಾದ ರೈ, ಪ್ರವೀನ್ ಪೂಜಾರಿ, ಪ್ರವೀಣ್ ಹೆಗ್ಡೆ ರವೀಂದ್ರ ಪೂಜಾರಿ, ಸಂತೋಷ್ ಶೆಟ್ಟಿ, ಸುಧಾಕರ್, ಗಿರೀಶ್ ಕುಮಾರ್, ಪುಷ್ಪ ಅಂಚನ್, ಸುರೇಶ್ ನಾಯಕ್, ನವೀನ್ ಸಾಲ್ಯಾನ್, ಹಸನ್ ಶೇಖ್, ರಮೀಜ್ ಹುಸೇನ್, ಚೇತನ್ ಶೆಟ್ಟಿ, ಬ್ಲಾಕ್‍ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು