ಮಣಿಪಾಲ: ಗಾಂಜಾ ಸೇವನೆ- ನಾಲ್ವರ ವಿರುದ್ಧ ದೂರು
ಮಣಿಪಾಲ ಜೂ.7(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವಿರುವ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಉಡುಪಿಯ ಹೆರ್ಗಾ ಗ್ರಾಮದ ಈಶ್ವರನಗರದ ಕಟ್ಟದಲ್ಲಿರುವ ಅಡ್ಡಾ ಎಂಬ ದೊಡ್ಡ ರೂಮ್ ನಲ್ಲಿ ಮ್ಯೂಸಿಕ್ ಹಾಕಿಕೊಂಡು ಪಾರ್ಟಿ ಮಾಡುತ್ತಿರುವುದಾಗಿ ಮಾಹಿತಿ ಮೇರೆಗೆ ಮಣಿಪಾಲ ಠಾಣಾ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಅತೀಶ್ ಆಚಾರ್ಯ (23), ರವೀಶ್ ಆರ್ ಬಂಗೇರ (23) ಎಂಬ ಇಬ್ಬರನ್ನು ಹಾಗೂ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಬಾರ್‌ವೊಂದರ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಆಶಿಶ್ ಎಸ್ ಶೆಟ್ಟಿ (22) ಮತ್ತು ವಿದ್ಯಾರತ್ನ ರೆಸಿಡೆನ್ಸಿಯ ರೂಮ್‌ವೊಂದರಲ್ಲಿ ಮೊನೀಶಾ ಕೃಷ್ಣ (20) ಎಂಬಾಕೆಯನ್ನು ಸೇರಿ ಒಟ್ಟು ನಾಲ್ವರನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಮಣಿಪಾಲದ ಫಾರೆನ್ಸಿಕ್ ವಿಭಾಗದ ವೈದ್ಯರ ಬಳಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು.
ಈ ನಾಲ್ವರ ವೈದ್ಯಕೀಯ ಪರಿಕ್ಷಾ ವರದಿಯಲ್ಲಿ ಇವರು ಗಾಂಜಾ ಸೇವಿಸಿರುವುದು ದೃಢಪಟ್ಟ ಕಾರಣ ಇವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ.