ಬೈಂದೂರು: ಮನೆಯಲ್ಲಿ 1 ಲ.ರೂ.ಮೌಲ್ಯದ ಸೊತ್ತು ಕಳವು
ಬೈಂದೂರು ಜೂ.7(ಉಡುಪಿ ಟೈಮ್ಸ್ ವರದಿ): ತಾಲೂಕಿನ ಮಯ್ಯಾಡಿಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು 1 ಲ.ರೂ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಗೈದಿದ್ದಾರೆ.
ಈ ಬಗ್ಗೆ ಶೋಭಾ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರ ಚಿಕ್ಕಪ್ಪ ದಿ. ಮದನ ಗೋಪಾಲ ಎಂಬುವವರ ಹೆಂಡತಿ ಹಾಗೂ ಮಕ್ಕಳು ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಬೈಂದೂರು ಗ್ರಾಮದ ಮಯ್ಯಾಡಿಯಲ್ಲಿರುವ ಅವರ ಮನೆಯನ್ನು ನೋಡಿಕೊಳ್ಳುವಂತೆ ಶೋಭಾ ಅವರಿಗೆ ತಿಳಿಸಿದ್ದರು. ಆದ ಕಾರಣ ಶೋಭಾ ಅವರು ಆಗಾಗ್ಗೆ ಮನೆ ಕಡೆ ಹೋಗಿ ಬರುತ್ತಿದ್ದರು. ಜೂ.6 ರಂದು ಬೆಳಿಗ್ಗೆ ಮನೆ ಕಡೆ ಹೋದಾಗ ಮನೆಯಲ್ಲಿ ಇದ್ದ 1,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.