ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಸುರಿದ ತ್ಯಾಜ್ಯ- ಸ್ವಚ್ಛಗೊಳಿಸಿ 10 ಸಾವಿರ ರೂ.‌ ದಂಡ ವಸೂಲಿ

ಉಡುಪಿ ಜೂ.6(ಉಡುಪಿ ಟೈಮ್ಸ್ ವರದಿ): ನಗರಸಭಾ ವ್ಯಾಪ್ತಿಯ ಇಂದ್ರಾಳಿ ವಾರ್ಡಿನ ಮಂಚಿ ಎಂಬಲ್ಲಿ ಅನಧಿಕೃತವಾಗಿ ಹಾಕಲಾದ ತ್ಯಾಜ್ಯವನ್ನು ಕಸ ಹಾಕಿದ ವ್ಯಕ್ತಿಯಿಂದಲೇ ವಿಲೇವಾರಿ ಮಾಡಿ ದಂಡ ವಿಧಿಸಲಾಗಿದೆ.

ಈ ಪರಿಸರಕ್ಕೆ ಟ್ರ್ಯಾಕ್ಟರ್ ನಲ್ಲಿ ತಂದು ಹಾಕಿದ್ದ ಮಿಶ್ರ ತ್ಯಾಜ್ಯದ ವಿಳಾಸವನ್ನು ಪತ್ತೆ ಹಚ್ಚಿದಾಗ ಮದರ್ ಆಫ್ ಸಾರೋಸ್ ಚರ್ಚ್‌ನದ್ದು ಎಂದು ತಿಳಿದು ಬಂದಿದೆ. ಚರ್ಚಿನ ಕಸವನ್ನು ಹನುಮೇಶ ಎಂಬುವವರಿಗೆ ತೆಗೆಯಲು ಹೇಳಿದ್ದು, ಅವರು ತ್ಯಾಜ್ಯವನ್ನು ತೆಗೆದು ಇಂದ್ರಾಳಿ ವಾರ್ಡಿನ ಮಂಚಿ ಎಂಬಲ್ಲಿ ಹಾಕಿರುತ್ತಾರೆ. ಇವರನ್ನು ಕಛೇರಿಗೆ ಕರೆಸಿ ಇವರಿಗೆ ರೂ. 10,000 ರೂ. ದಂಡವನ್ನು ವಿಧಿಸಿದ್ದು ಮಾತ್ರವಲ್ಲದೆ ತ್ಯಾಜ್ಯವನ್ನು ಅವರಿಂದನೇ ತೆಗೆಸಲಾಯಿತು.

ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನೀಟರಿ ಸೂಪರ್‌ವೈಸರ್‌ನವರು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದಾರೆ.

ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಯವರು ತ್ಯಾಜ್ಯವನ್ನು ಕಂಡ ಕಂಡಲ್ಲಿ ಬೀಸಾಕದೇ ನಗರಸಭೆಯ ವಾಹನಕ್ಕೆ ನೀಡಲು ಕೋರಲಾಗಿದೆ. ತಪ್ಪಿದ್ದಲ್ಲಿ ತ್ಯಾಜ್ಯವನ್ನು ಎಸೆಯುವವರ ಮೇಲೆ ರೂ.‌ 25,000 ರವರೆಗೆ ದಂಡ ವಿಧಿಸಲಾಗುವುದು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!