ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಯಾತ್ರಾರ್ಥಿಯ ಚಿನ್ನಾಭರಣ ಕಳವು
ಕೊಲ್ಲೂರು ಜೂ.6(ಉಡುಪಿ ಟೈಮ್ಸ್ ವರದಿ):ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಯಾತ್ರಾರ್ಥಿಯೊಬ್ಬರ ಬ್ಯಾಗ್ನಲ್ಲಿ ಇಟ್ಡಿದ್ದ ಚಿನ್ನದ ಸರ ಕಳವಾಗಿರುವ ಘಟನೆ ನಡೆದಿದೆ
ಈ ಬಗ್ಗೆ ಸುರತ್ಕಲ್ನ ನಿವಾಸಿ ಕೇರಳದ ಕಾಸರಗೋಡು ಮೂಲದ ಪ್ರವೀಣ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಜೂ.4 ರಂದು ತಮ್ಮ ಹೆಂಡತಿ ವಾಣಿಶ್ರೀ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದರು. ಮನೆಯಲ್ಲಿ ಯಾರು ಇಲ್ಲದ ಕಾರಣ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಚಿಕ್ಕ ಪರ್ಸ್ ನಲ್ಲಿ ಹಾಕಿ ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು. ಬೆಳಿಗ್ಗೆ 11:00 ಗಂಟೆಗೆ ದೇವರ ದರ್ಶನ ಮಾಡಿ ದೇವಸ್ಥಾನದ ಹೊರಗಡೆ ಬಂದಾಗ ವಾಣಿಶ್ರೀ ಅವರ ವ್ಯಾನಟಿ ಬ್ಯಾಗ್ ನ ಜೀಪ್ ಓಪನ್ ಆಗಿದ್ದು ಅದರಲ್ಲಿ 4.75 ಲ.ರೂ. ಮೌಲ್ಯದ ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅದರಂತೆ ದೇವಸ್ಥಾನದಲ್ಲಿ ಕಳ್ಳರು ವಾಣಿಶ್ರೀ ಅವರ ಚಿನ್ನಾಭರಣಗಳಿದ್ದ ಪರ್ಸ್ ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.