ಬ್ರಹ್ಮಾವರ: ನಿಯಂತ್ರಣ ತಪ್ಪಿದ ಕಾರು ಮಣ್ಣಿನ ದಿಬ್ಬಕ್ಕೆ ಡಿಕ್ಕಿ- ಸಹ ಪ್ರಯಾಣಿಕ ಮೃತ್ಯು
ಬ್ರಹಾವರ ಜೂ.5 (ಉಡುಪಿ ಟೈಮ್ಸ್ ವರದಿ): ನಾಯಿಯೊಂದು ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ಬದಿಯ ಮಣ್ಣಿನ ದಿಬ್ಬಕ್ಕೆ ಗುದ್ದಿ ಸಹಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಹಲುವಳ್ಳಿ ಗ್ರಾಮದ ದಾರಳಕಂಬ್ಳಾ ಎಂಬಲ್ಲಿ ನಡೆದಿದೆ.
ಟಿ.ಎಮ್. ಮಲ್ಲಿಕಾರ್ಜುನಯ್ಯ (71) ಮೃತಪಟ್ಟವರು. ಇವರು ತನಗಿರುವ ಹೃದಯ ಕಾಯಿಲೆಯ ತಪಾಸಣೆಗಾಗಿ ಮೇ. 29 ರಂದು ಮಗ ವಿಶ್ವನಾಥ ಚಲಾಯಿಸುತ್ತಿದ್ದ ಅವರ ಕಾರಿನಲ್ಲಿ ಮಂಗಳೂರಿನ ಎ,ಜೆ. ಆಸ್ಪತ್ರೆಗೆ ಹೆಬ್ರಿ ಬ್ರಹ್ಮಾವರ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಬೆಳಗಿನ ಜಾವ ಹಲುವಳ್ಳಿ ಗ್ರಾಮದ ದಾರಳಕಂಬ್ಳಾ ಎಂಬಲ್ಲಿರುವ ಗೇರು ಬೀಜ ಪ್ಯಾಕ್ಟರಿ ಎದುರು ತಲುಪುವಾಗ ನಾಯಿಯೊಂದು ಕಾರಿಗೆ ಅಡ್ಡ ಬಂದಿದ್ದರಿಂದ ವಿಶ್ವನಾಥರವರು ಕಾರನ್ನು ನಿಧಾನಿಸಲು ಹೋಗಿ ನಿಯಂತ್ರಣ ತಪ್ಪಿ ಕಾರು ರಸ್ತೆಯ ಸಮೀಪದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಎದುರಿನ ಸೀಟಿನಲ್ಲಿ ಕುಳಿತಿದ್ದ ಟಿ.ಎಮ್. ಮಲ್ಲಿಕಾರ್ಜುನಯ್ಯ ರವರ ಕುತ್ತಿಗೆಯ ಭಾಗಕ್ಕೆ ಒಳಪೆಟ್ಟು ಆಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಟಿ.ಎಮ್. ಮಲ್ಲಿಕಾರ್ಜುನಯ್ಯ ರವರು ನಿನ್ನೆ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.