ನಕಲಿ ಆಭರಣ ಅಡವಿಟ್ಟು ಎಕ್ಸಿಸ್ ಬ್ಯಾಂಕಿಗೆ 86 ಲಕ್ಷ ರೂ. ವಂಚನೆ
ಭಟ್ಕಳ: ನಕಲಿ ಬಂಗಾರಗಳನ್ನು ಅಸಲಿ ಬಂಗಾರ ಎಂದು ನಂಬಿಸಿ ಭಟ್ಕಳ ಎಕ್ಸಿಸ್ ಬ್ಯಾಂಕಿನಿಂದ ರೂ.86 ಲಕ್ಷಕ್ಕೂ ಹೆಚ್ಚು ಸಾಲ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮೊದಲನೆಯ ಪ್ರಕರಣದಲ್ಲಿ ಆರೋಪಿಗಳನ್ನು ತಾಲೂಕಿನ ಆಸರಕೇರಿ ನಿವಾಸಿ ಬಂಗಾರ ಪರಿವೀಕ್ಷಕ ಉದಯ ಎಸ್. ರಾಯ್ಕರ್, ಭಟ್ಕಳ ಮುಖ್ಯರಸ್ತೆಯ ಸುನಂದಾ ಪಾಂಡುರಂಗ ನಾಯ್ಕ, ಕುಮಟಾ ದೇವಥಕ್ಕಲ್ ನಿವಾಸಿ ಸುಲೋಚನಾ ನಾಯ್ಕ, ಶಿವಮೊಗ್ಗ ಸಾಗರ ನಾಗವಳ್ಳಿಯ ಹೇಮಾವತಿ ಉಮೇಶ ನಾಯ್ಕ, ಶಿರಸಿ ಉಪ್ಪಾಳೆ ಕೊಪ್ಪದ ಸರೀತಾ ರತ್ನಾಕರ ಭಂಡಾರಿ, ಮೂಡಭಟ್ಕಳದ ಕೇಶವ ನಾಗಪ್ಪ ನಾಯ್ಕ, ಭಟ್ಕಳ ಜಾಲಿ ದೊಡ್ಡಮನೆಯ ಪ್ರಕಾಶ ರಾಮಚಂದ್ರ ಆಚಾರಿ, ಚೌಥನಿ ಕೆ.ಬಿ.ರೋಡ್ ನಿವಾಸಿ ಮಂಜುನಾಥ ನಾರಾಯಣ ನಾಯ್ಕ ಎಂದು ಹೆಸರಿಸಲಾಗಿದೆ.
ಆರೋಪಿಗಳು 2023, ಮಾ.1ರಿಂದ ಮಾ30ರ ನಡುವಿನ ಅವಧಿಯಲ್ಲಿ ನಕಲಿ ಬಂಗಾರ ಅಡವಿಟ್ಟು ಒಟ್ಟೂ 58,92,400 ರೂ. ಸಾಲ ಪಡೆದಿದ್ದರೆ, 2ನೇ ಪ್ರಕರಣದಲ್ಲಿ ಆರೋಪಿಗಳನ್ನು ಬಂಗಾರ ಪರಿವೀಕ್ಷಕ ಉದಯ ಎಸ್. ರಾಯ್ಕರ್ ಆಸರಕೇರಿ, ನಾಗರಾಜ ಕೃಷ್ಣ ನಾಯ್ಕ ಜಾಲಿಕೋಡಿ ಜಾಲಿ, ಚೌಥನಿಯ ಮಂಜುನಾಥ ನಾರಾಯಣ ನಾಯ್ಕ, ಭಟ್ಕಳ ಮುಖ್ಯ ರಸ್ತೆಯ ಸುನಂದಾ ಪಾಂಡುರಂಗ ನಾಯ್ಕ ಆರೋಪಿಗಳಾಗಿದ್ದು, 2023 ಫೆ.6ರಿಂದ 20ರ ನಡುವಿನ ಅವಧಿಯಲ್ಲಿ ನಕಲಿ ಬಂಗಾರ ಅಡವಿಟ್ಟು 27,54,900 ರೂ. ಸಾಲ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.