ಕೋಟ: ಅಂಗಡಿಗೆಂದು ಹೋದ ಮಹಿಳೆ ನಾಪತ್ತೆ
ಕೋಟ ಜೂ.2(ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರದ ಬನ್ನಾಡಿ ಗ್ರಾಮದಲ್ಲಿ ಅಂಗಡಿಗೆಂದು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಚಂದು ಮರಕಾಲ್ತಿ (60) ನಾಪತ್ತೆಯಾಗಿರುವವರು. ಇವರು ಎಂದಿನಂತೆ ಬನ್ನಾಡಿ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಬೀಡ ಅಂಗಡಿಗೆ ನಶ್ಯ ತರಲು ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ ಎಂಬುದಾಗಿ ಚಂದು ಮರಕಾಲ್ತಿ ಅವರ ಮಗಳು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.