ಕಾರ್ಕಳ: ಮನೆಯಲ್ಲಿ 5 ರೂ. ಮೌಲ್ಯದ ಚಿನ್ನಾಭರಣ ಕಳವು
ಕಾರ್ಕಳ ಜೂ.1(ಉಡುಪಿ ಟೈಮ್ಸ್ ವರದಿ): ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಬಗ್ಗೆ ನಂದಳಿಕೆ ಗ್ರಾಮದ ಎನ್ ಸುಧಾಕರ ರಾವ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಮೇ 26 ರ ಮಧ್ಯಾಹ್ನದಿಂದ ಮೇ 30 ರ ಸಂಜೆಯ ನಡುವಿನ ಅವಧಿಯಲ್ಲಿ ನಂದಳಿಕೆ ಗ್ರಾಮದಲ್ಲಿ ಸುಧಾಕರ ರಾವ್ ಅವರು ವಾಸವಿರುವ ಮನೆಯ ಪಕ್ಕದಲ್ಲಿರುವ ಮೂಲಮನೆ ಮೂಡುಮನೆಯ ಕಪಾಟಿನಲ್ಲಿ ಇಟ್ಟಿದ್ದ ಎನ್ ಸುಧಾಕರ ರಾವ್ ರವರ ಹೆಂಡತಿಯ ಅಂದಾಜು 24 ಪವನ್ ತೂಕದ 5 ಲಕ್ಷ ರೂ. ಮೌಲ್ಯದ ಒಡವೆಗಳನ್ನು, 3000 ನಗದು ಹಾಗೂ ಇತರ ದಾಖಲೆಗಳನ್ನು ಕಳ್ಳರು ಕಳವುಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.