ಕೋಟ: ವ್ಯಕ್ತಿ ನಾಪತ್ತೆ
ಕೋಟ ಜೂ.1 (ಉಡುಪಿ ಟೈಮ್ಸ್ ವರದಿ): ಶಿರಿಯಾರ ಗ್ರಾಮದ ಸಾಯಿಬ್ರಕಟ್ಟೆ ತೆಂಕಬೈಲ್ಲಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿನಕರ ಶೆಟ್ಟಿ (32 ) ನಾಪತ್ತೆಯಾಗಿರುವವರು. ಮಂಡ್ಯದಲ್ಲಿ ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ದಿನಕರ ಶೆಟ್ಟಿ ಅವರು ಜನವರಿಯಲ್ಲಿ ಶಿರಿಯಾರ ಗ್ರಾಮದ ಸಾಯಿಬ್ರಕಟ್ಟೆ ತೆಂಕಬೈಲುವಿನಲ್ಲಿ ಇತುವ ತಮ್ಮ ಮನೆಗೆ ಬಂದು ಎರಡು ದಿನ ಇದ್ದು ಹೋಗಿದ್ದರು. ನಂತರ ದಿನಕರ ಶೆಟ್ಟಿ ಯವರು ಯಾವುದೇ ಕರೆ ಮಾಡದೇ ಯಾವುದೇ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ ಎಂಬುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.