ಮುಖ್ಯಮಂತ್ರಿ ಪದಕ ಪುರಸ್ಕಾರ: ಉಡುಪಿಯ ಪೊಲೀಸ್ ಅಧಿಕಾರಿ ರಾಮಚಂದ್ರ ನಾಯಕ್ ಮತ್ತು ರಾಘವೇಂದ್ರ ಎಂ.ಬೈಂದೂರು ಆಯ್ಕೆ
ಉಡುಪಿ(ಉಡುಪಿಟೈಮ್ಸ್ ವರದಿ): 2020 ನೇ ಸಾಲಿನ ಮುಖ್ಯ ಮಂತ್ರಿ ಪದಕ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ ಸೆನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ಅವರು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಬೆಂಗಳೂರು ಪೊಲೀಸರು ಹೊರಡಿಸಿದ ಪ್ರಕಟಣೆಯಲ್ಲಿ ಮಾಹಿತಿ ಲಭ್ಯವಾಗಿದ್ದು, ಈ ಪದಕ ಪುರಸ್ಕಾರಕ್ಕೆ ದ.ಕ ಜಿಲ್ಲೆ, ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಹಾಸನ, ಗದಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ. ಸದ್ಯ ಈ ಪುರಸ್ಕಾರಕ್ಕೆ ಆಯ್ಕೆ ಆಗಿರುವ 115 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಪೈಕಿ ಉಡುಪಿ ಜಿಲ್ಲೆಯ ರಾಮಚಂದ್ರ ನಾಯಕ್ ಅವರು ಆಯ್ಕೆ ಆಗಿರುವುದು ಜಿಲ್ಲೆಗೆ ಹೆಮ್ಮೆಪಡುವ ವಿಚಾರವಾಗಿದೆ.
ಇನ್ನೊಂದು ಮಂತ್ರಿ ಪದಕ ಪುರಸ್ಕಾರಕ್ಕೆ ಬೈಂದೂರಿನವರಾದ ಪ್ರಸ್ತುತ ಎಸ್.ಐ.ಟಿ ಲೋಕಾಯುಕ್ತ ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಎಂ. ಬೈಂದೂರು ಇವರು ಆಯ್ಕೆಯಾಗಿರುತ್ತಾರೆ.