ಮಂಗಳೂರು: ಬಸ್- ಸ್ಕೂಟರ್ ಅಪಘಾತ ; ಸವಾರ ಗಂಭೀರ
ಮಂಗಳೂರು: ಬಸ್-ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಂಬೀರ ಗಾಯಗೊಂಡ ಘಟನೆ ಇಂದು (ಮಾ.22) ತಲಪಾಡಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ಉದ್ಯಾವರ ನಿವಾಸಿ ತುಳಸಿ ಎಂದು ಗುರುತಿಸಲಾಗಿದೆ.
ತಲಪಾಡಿಯಲ್ಲಿ ಟೈರ್ ಅಂಗಡಿಯೊಂದನ್ನು ನಡೆಸುತ್ತಿದ್ದ ಇವರು ಇಂದು ಅಂಗಡಿಗೆ ತೆರಳುತ್ತಿದ್ದರು. ಈ ವೇಳೆ ಡಿವೈಡರ್ ಮಧ್ಯೆ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡು ಕಡೆಗೆ ಚಲಿಸುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ತುಳಸಿ ಅವರು ಗಂಭೀರ ಗಾಯಗೊಂಡಿದ್ದಯ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಬಸ್ಸಿನಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನಾಗೂರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.