ಐದು ಗ್ಯಾರಂಟಿ ಕಾರ್ಡ್ ಯೋಜನೆಗೆ ತಾತ್ವಿಕ ಒಪ್ಪಿಗೆ-ಪ್ರಹ್ಲಾದ್ ಜೋಶಿ ಆಕ್ರೋಶ

ಹುಬ್ಬಳ್ಳಿ ಮೇ 21 :ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈಡೇರಿಸುವುದಾಗಿ ತಿಳಿಸಿದ ಕಾಂಗ್ರೆಸ್ ಇದೀಗ ರಾಜ್ಯಕ್ಕೆ ತೆರಿಗೆ ವಿಕೇಂದ್ರೀಕರಣ ಅನುದಾನ ಸರಿಯಾಗಿ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘ಚುನಾವಣಾ ಕಾರಣಕ್ಕಾಗಿ ಕಾಂಗ್ರೆಸ್ ರಾಜ್ಯದ ಜನತೆಗೆ ಐದು ಭರವಸೆಗಳನ್ನು ನೀಡಿತ್ತು. ಅವುಗಳನ್ನು ಈಡೇರಿಸುವ ಆಸಕ್ತಿ ಅವರಲ್ಲಿಲ್ಲ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದೇವೆ ಎನ್ನುತ್ತ ಕೇಂದ್ರ ಸರ್ಕಾರದಿಂದ ಅನುದಾನ ಕಡಿಮೆ ಬಂದಿದೆ ಎನ್ನುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಹಾಗೂ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‌ ಪರಿಣತಿ ಪಡೆದಿರುವ ವಿಶೇಷ ಪಕ್ಷವಾಗಿದೆ’ ಎಂದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ 700 ರಿಂದ 800 ಕೋಟಿ ಅನುದಾನವಷ್ಟೇ ಬರುತ್ತಿತ್ತು. ನಮ್ಮ ಆಡಳಿತದ ಅವಧಿಯಲ್ಲಿ 5 ಸಾವಿರದಿಂದ 7 ಸಾವಿರ ಕೋಟಿಗಳಷ್ಟು ಬಂದಿದೆ. 2009-10ರ ಅವಧಿಯಲ್ಲಿ 2,476 ಕೋಟಿ ಬಂದಿದ್ದರೆ, 2019-20ರ ಅವಧಿಯಲ್ಲಿ 7,578 ಕೋಟಿ, 2021-22ರ ಅವಧಿಯಲ್ಲಿ 7,862 ಕೋಟಿ ಅನುದಾನ ಬಂದಿದೆ. ವರ್ಷದಿಂದ ವರ್ಷಕ್ಕೆ ಈ ಅನುದಾನ ಹೆಚ್ಚಳವಾಗುತ್ತಿದೆ. ಆದರೆ ಕಾಂಗ್ರೆಸ್  ರಾಜ್ಯಕ್ಕೆ ತೆರಿಗೆ ವಿಕೇಂದ್ರೀಕರಣ ಅನುದಾನ ಸರಿಯಾಗಿ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!