ಡಾ. ಎನ್.ಟಿ. ಭಟ್ಟರವರ ನಾಡೋಜ ಕೆ.ಪಿ.ರಾಯರ ಕುರಿತ ಕೃತಿ ಲೋಕಾರ್ಪಣೆ

ಉಡುಪಿ( ಉಡುಪಿ ಟೈಮ್ಸ್ ವರದಿ): ಡಾ. ಎನ್.ಟಿ. ಭಟ್ಟರು ಬರೆದ “ನಾಡೋಜ ಕೆ.ಪಿ.ರಾಯರ ನಾಡಿ, ನುಡಿ, ನಡೆ” ಪುಸ್ತಕ ಲೋಕಾರ್ಪಣೆ ಸಮಾರಂಭ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವೇದಿಕೆಯಲ್ಲಿ ನಡೆಯಿತು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಪಾದೇಕಲ್ಲು ವಿಷ್ಣು ಭಟ್ ಅವರು ಮಾತನಾಡಿ, “ನಾಡೋಜ ಪ್ರೊ ಕೆ ಪಿ ರಾವ್ ಅವರು ಬಹುಮುಖ ವ್ಯಕ್ತಿತ್ವವುಳ್ಳವರು. ವಿಜ್ಞಾನ, ವೇದಗಳು, ಪಾಣಿನಿಯ ವ್ಯಾಕರಣ ಸೂತ್ರಗಳು, ಪಶ್ಚಿಮದ ವಿದ್ವಾಂಸರು ನಮ್ಮ ಪ್ರಾಚೀನ ಗ್ರಂಥಗಳನ್ನು ಕುರಿತು ನಡೆಸಿದ ಅಧ್ಯಯನ ಎಲ್ಲವನ್ನೂ ಪರಿಶೀಲಿಸಿದವರು. ವೇದಗಳನ್ನು ವಿದ್ಯುಕ್ತ ಉಚ್ಚಾರದ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ ಸಾಧನೆ ವೇದಾಧ್ಯಾಯಿಗಳದು ಎಂದು ಪ್ರತಿಪಾದಿಸುವ ಪ್ರೊ ಕೆ ಪಿ ರಾಯರದ್ದು ವಿಶಿಷ್ಟ ವ್ಯಕ್ತಿತ್ವ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಉದಯ ಶಂಕರ್ ಕೆ.ಪಿ ರಾವ್ ಹಾಗೂ ಎನ್.ಟಿ ಭಟ್ಟರ ನ್ನು ಅಭಿನಂದಿಸಲಾಯಿತು. ಡಾ.ಜನಾರ್ದನ ಭಟ್ ಬೆಳ್ಮಣ್ಣು ಅವರು ಕೃತಿ ಪರಿಚಯ ಮಾಡಿಕೊಟ್ಟಿದ್ದು, ಕಾರ್ಯಕ್ರಮದ ಪೂರ್ವ ಭಾವಿಯಾಗಿ ಶರತ್ ಹಳೆಯಂಗಡಿಯವರಿಂದ ಗಿಟಾರ್ ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಡಾ.ಎನ್ ಟಿ.ಭಟ್, ವಿದುಷಿ ಸರೋಜ ಆಚಾರ್ಯ, ಉಮಾಶಂಕರಿ, ಶ್ರೀನಿವಾಸ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!