ಮಂಟಪದಲ್ಲೇ ವರನನ್ನು ನಿರಾಕರಿಸಿದ ವಧು… ಕಾರಣ ಏನು ಗೊತ್ತಾ…
ಪಾಟ್ನಾ ಮೇ 18 :ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ಮದುವೆ ವೇದಿಕೆಯಲ್ಲಿ ಯುವತಿಯೊಬ್ಬಳು ವರನನ್ನು ನಿರಾಕರಿಸಿದ ಘಟನೆ ನಡೆದಿದೆ.
ರಸಲ್ಪುರ ಪೊಲೀಸ್ ವ್ಯಾಪ್ತಿಯ ಕಹಲ್ಗಾಂವ್ ಮೂಲದ ವಧುವಿನ ವಿವಾಹವು ಮೇ 15 ರಂದು (ಸೋಮವಾರ) ಧನೌರಾ ಮೂಲದ ವರನೊಂದಿಗೆ ನಿಶ್ಚಯವಾಗಿತ್ತು. ಇನ್ನೇನು ಹಾರ ಬದಲಾಯಿಸಿಕೊಂಡು ಮದುವೆ ಕಾರ್ಯಕ್ರಮ ಸಮಾಪ್ತಿ ಆಗಬೇಕು ಅಷ್ಟೋತ್ತಿಗೆ ವಧು ತನಗೆ ಈ ಮದುವೆ ಬೇಡವೆಂದು ನಿಶ್ಚಯಿಸಿದ್ದಾಳೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗದ್ದಲ ಉಂಟಾಯಿತು. ಆ ಬಳಿಕ ಯುವತಿಯ ಬಳಿ ಮದುವೆಯನ್ನು ಯಾಕೆ ನಿರಾಕರಿಸಿದ ಎಂದ ಮನೆಯವರು ಕೇಳಿದಾಗ ಯುವತಿಯು ವರ ಕುಡಿದು ಬಂದಿದ್ದಾನೆ ಮತ್ತು ಆತ ತನಗಿಂತ ಹಿರಿಯನಾಗಿದ್ದೇನೆ. ನಾನು ಈ ಮದುವೆಯನ್ನು ಆಗಲಾರೆ ಎಂದಿದ್ದಾಳೆ.
ಎರಡೂ ಕುಟುಂಬದವರು ಯುವತಿಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಯುವತಿ ತನ್ನ ನಿರ್ಧಾರಕ್ಕೆ ಬದ್ದಳಾಗಿದ್ದಳು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ವರನ ಮನೆಯವರಿಗೆ ಬುದ್ದಿಮಾತನ್ನು ಹೇಳಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.