ಯಾರೂ ವಿದ್ಯುತ್ ಬಿಲ್ ಕಟ್ಟಬಾರದು- ನಳಿನ್ ಕಟೀಲ್ ಮನವಿ

ಬೆಂಗಳೂರು, ಮೇ 17: ಕಾಂಗ್ರೆಸ್‌ನ 200 ಯೂನಿಟ್ ವಿದ್ಯುತ್ ಉಚಿತ ಭರವಸೆ ಹಿನ್ನೆಲೆಯಲ್ಲಿ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬಾರದೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,‌ “ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ” ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳಿದ್ದರು. ಹೀಗಾಗಿ ಜನರು ಯಾರೂ ಈಗ ವಿದ್ಯುತ್ ಬಿಲ್ ಕಟ್ಟಬಾರದೆಂದು ಮನವಿ ಮಾಡುತ್ತೇನೆ’ ಎಂದು  ಹೇಳಿದ್ದಾರೆ.

ಕಾಂಗ್ರೆಸ್‍ನ ಗ್ಯಾರೆಂಟಿಗಳಿಂದ ಕೆಲವು ಕಡೆ ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸಲಾಗುತ್ತಿದೆ. ಜನರ ಈ ನಿರ್ಧಾರ ಸಹಜವೇ ಆಗಿದೆ. ನಮ್ಮ ಸರ್ಕಾರ ಬಂದ ಮೇಲೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಭರವಸೆ ನೀಡಿದ್ದರು. ನನಗೂ ಸೇರಿ ಉಚಿತ ಕರೆಂಟ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅಲ್ವಾ?. ಹೀಗಿರುವಾಗ ಜನರು ಏಕೆ ವಿದ್ಯುತ್ ಬಿಲ್ ಪಾವತಿಸಬೇಕು? ಎಂದು ಪ್ರಶ್ನಿಸಿದರು.

‘ರಾಜ್ಯದ ಜನರು ಕರೆಂಟ್ ಬಿಲ್ ಕಟ್ಟಬೇಡಿ, ಅವರೇ ಹೇಳಿರುವಂತೆ ಭಾಗ್ಯಗಳ ಲೆಕ್ಕದಲ್ಲಿ ಯಾರೂ ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ, ಕಾಂಗ್ರೆಸ್‍ನವರೇ ಜನರ ಕರೆಂಟ್ ಬಿಲ್ ಕಟ್ಟುತ್ತಾರೆ’, ‘ರಾಜ್ಯದ ಜನರು ಕಾಂಗ್ರೆಸ್‍ಗೆ ಬಹುಮತ ನೀಡಿದ್ದು, ಆಡಳಿತ ನಡೆಸಲಿ. ತ್ವರಿತಗತಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಬೇಕು ಎಂದು ಆಗ್ರಹಿಸಿದರು.

4 thoughts on “ಯಾರೂ ವಿದ್ಯುತ್ ಬಿಲ್ ಕಟ್ಟಬಾರದು- ನಳಿನ್ ಕಟೀಲ್ ಮನವಿ

  1. What about Modi’s promise of 15 lakhs in everybody’s account? How many years have passed? Was this man dead for so many years?

  2. That was said in a election speech by Modi but it was not there in the manifesto…whereas this promise regarding free 200 units electricity is there in the manifesto please!

Leave a Reply

Your email address will not be published. Required fields are marked *

error: Content is protected !!