ಪ್ರಯಾಣದ ವೇಳೆ ವಿಮಾಣದ ಶೌಚಾಲಯದಲ್ಲಿ ಬೀಡಿ ಸೇದಿದ ವ್ಯಕ್ತಿ… ಮುಂದೇನಾಯ್ತು ಗೊತ್ತಾ..?
ಬೆಂಗಳೂರು ಮೇ 17 : ಪ್ರಯಾಣದ ವೇಳೆ ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ರಾಜಸ್ಥಾನ ಮರ್ವಾರ್ ಮೂಲದ 56 ವರ್ಷ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ.
ಅಹಮದಾಬಾದ್‌ನಿಂದ ಆಕಾಶ ಏರ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದ ಈತ ಪ್ರಯಾಣದ ವೇಳೆ ಶೌಚಾಲಯಕ್ಕೆ ತೆರಳಿ ಬೀಡಿ ಸೇದಿದ್ದಾನೆ. ಕೂಡಲೇ ವಿಮಾನ ಪರಿಚಾರಕರು ಕ್ರಮ ತೆಗೆದುಕೊಂಡಿದ್ದು, ಲ್ಯಾಂಡಿಂಗ್ ಆದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ವ್ಯಕ್ತಿ ತಾನು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದಾಗಿಯೂ, ನಿಯಮಗಳ ಬಗ್ಗೆ ತಮಗೆ ಅರಿವಿಲ್ಲದಿರುವುದಾಗಿಯೂ. ಹಾಗೂ ತಾನು ರೈಲು ಪ್ರಯಾಣದ ವೇಳೆ ಶೌಚಾಲಯದಲ್ಲಿ ಬೀಡಿ ಸೇದುತ್ತಿದ್ದೆ. ಅದನ್ನೇ ಇಲ್ಲಿಯೂ ಮಾಡಿದೆ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.