ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಹೆಚ್ಚಳದ ಬರೆ
ಬೆಂಗಳೂರು ಮೇ 12 : ಚುನಾವಣೆ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದಲ್ಲಿ ಜನತೆಗೆ ವಿದ್ಯುತ್ ದರ ಹೆಚ್ಚಳದ ಶಾಕ್ ನೀಡಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕ.ವಿ.ವಿ.ಆ)ವು ಆರ್ಥಿಕ ವರ್ಷ 2023-24ನೇ ಸಾಲಿಗೆ ಎಲ್ಲಾ ವಿತರಣಾ ಪರವಾನಿಗೆದಾರರ ವ್ಯಾಪ್ತಿಯ ಗ್ರಾಹಕರಿಗೆ ಅನ್ವಯವಾಗುವಂತೆ ವಿದ್ಯುಚ್ಛಕ್ತಿ ದರಗಳ ಪರಿಷ್ಕರಣೆಯನ್ನು ಅನುಮೋದಿಸಿದೆ.
ಅದರಂತೆ ಪ್ರತಿ ಯೂನಿಟ್ ಗೆ ಸರಾಸರಿ 70 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಇದು ಎಪ್ರಿಲ್ 1ರಿಂದ ಪೂರ್ವಾನ್ವಯ ಆಗಲಿದೆ. ಒಟ್ಟಾರೆ 70 ಪೈಸೆಯಲ್ಲಿ ನಿಗದಿತ ಶುಲ್ಕ ಮತ್ತು ವಿದ್ಯುತ್ ಬಳಕೆ ಶುಲ್ಕ ಎರಡೂ ಸೇರಿದೆ ಎಂದು KERC ತಿಳಿಸಿದೆ.
ಎಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್ ಮೇಲೆ 1.46 ರೂ.ಹೆಚ್ಚು ಮಾಡುವಂತೆ ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು.