ಮೈಸೂರು: ಮತದಾನಕ್ಕೆ ಬಂದು ಇವಿಎಂ ಕಂಟ್ರೋಲ್ ಯೂನಿಟ್ ಒಡೆದು ಹಾಕಿದ ವ್ಯಕ್ತಿ ಪೊಲೀಸ್ ವಶಕ್ಕೆ
ಮೈಸೂರು ಮೇ 12: ಮತದಾನ ಕೇಂದ್ರದಲ್ಲಿ ಇವಿಎಂ ಯಂತ್ರವನ್ನು ಒಡೆದು ಹಾಕಿ ಗಲಾಟೆ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮತಯಂತ್ರಕ್ಕೆ ಹಾನಿಗೊಳಿಸಿದ ಆರೋಪಿ ಶಿವಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಕೈಗೊಂಡಿದ್ದು. ಆರೋಪಿಯನ್ನು ತನಿಖೆಗೆ ಒಳಪಡಿಸಲಾಗಿದೆ” ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ನಗರಕ್ಕೆ ಹೊಂದಿಕೊಂಡ ಮತಗಟ್ಟೆ 40 ರಲ್ಲಿ ಶಿವಮೂರ್ತಿ ಎಂಬಾತ ಬುಧವಾರ ಮತದಾನ ಮಾಡಲು ಬಂದು ಮತದಾನದ ಯೂನಿಟ್ ಅನ್ನು ಕಿತ್ತು ನೆಲಕ್ಕೆ ಬಿಸಾಕಿ ಹಾನಿಗೊಳಿಸಿದ್ದಾನೆ. ಕೂಡಲೇ ಮತಗಟ್ಟೆ ಅಧಿಕಾರಿಗಳು ಕಂಟ್ರೋಲ್ ಯೂನಿಟ್ ಅನ್ನು ಬದಲಾಯಿಸಿದ್ದಾರೆ. ಇದರಿಂದ ಅರ್ಧಗಂಟೆ ಮತದಾನದಲ್ಲಿ ವಿಳಂಬವಾಗಿತ್ತು ಎನ್ನಲಾಗಿದೆ.
ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.