ವಿದ್ಯಾರ್ಥಿ ವೇತನ, ಅರಿವು ಸಾಲದ ಹಣ ದುರುಪಯೋಗದ ಆರೋಪ – ಎಸ್.ಐ.ಓ ನಿಂದ ಸೂಕ್ತ ತನಿಖೆಗೆ ಆಗ್ರಹ

ಬೆಂಗಳೂರು (ಉಡುಪಿ ಟೈಮ್ಸ್ ವರದಿ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನವನ್ನು ದುರುಪಯೋಗ ಮಾಡಿರುವ ಆರೋಪಕ್ಕೆ ಸೂಕ್ತ ತನಿಖೆ ನಡೆಸಲು ಎಸ್.ಐ.ಓ ಕರ್ನಾಟಕ ಆಗ್ರಹಿಸಿತು.

ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸುಮಾರು 5.2 ಕೋಟಿ ಹಣವನ್ನು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ದುರುಪಯೋಗ ಮಾಡಿ ಬೇರಡೆ ವರ್ಗಾಯಿಸಿರುವ ಬಗ್ಗೆ ಗಂಭೀರ ಆರೋಪವಿದೆ. ಈಗಾಗಲೇ ವಿದ್ಯಾರ್ಥಿಗಳು 2019-20 ರ ಸಾಲಿನ ವಿದ್ಯಾರ್ಥಿ ವೇತನ ವಂಚಿತರಾಗಿದ್ದು ಈಗ ಕೇಳಿ ಬಂದಿರುವ ಆರೋಪವು ವಿದ್ಯಾರ್ಥಿಗಳೊಂದಿಗಿನ ದ್ರೋಹವಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾದದಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.

ಉನ್ನತ ವಿದ್ಯಾಭ್ಯಾಸಗಳಿಗೆ ಸಾಲ ಸೌಲಭ್ಯ ನೀಡುವ ‘ಅರಿವು-2’ ಯೋಜನೆಯ ಸುಮಾರು 50 ಕೋಟಿ ಹಣ ದುರುಪಯೋಗ ಮಾಡಿರುವ ಬಗ್ಗೆ ಆರೋಪವಿದ್ದು, ಈ ಬಗ್ಗೆ ಈಗಾಗಲೇ 2019 ರಲ್ಲಿ ಪ್ರಕರಣ ದಾಖಲಾಗಿದ್ದರೂ ಸೂಕ್ತ ತನಿಖೆಯಾಗಿಲ್ಲ. ಆದ್ದರಿಂದ ‘ಅರಿವು – 2’ ಸಾಲ ಯೋಜನೆಯ ಮೇಲಿನ ಆರೋಪದ ಮೇಲು ರಾಜ್ಯ ಸರಕಾರ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ ಕರ್ನಾಟಕದ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಪೀರ್ ಲಟಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!