ಮದುವೆ ಸಮಾರಂಭದಲ್ಲಿ ವಧು-ವರರಿಂದ ಮತದಾನದ ಜಾಗೃತಿ- ವ್ಯಾಪಕ ಶ್ಲಾಘನೆ
ಕುಷ್ಟಗಿ ಮೇ 9 : ಮದುವೆ ಸಂಭ್ರಮದ ನಡುವೆಯೂ ಜೋಡಿ ನವ ವಧು ವರರು ಮತದಾನದ ಜಾಗೃತಿ ಮೂಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಾಲೂಕಿನ ಕಡೇಕೊಪ್ಪ ಗ್ರಾಮದ ಕುಷ್ಟಗಿಯ ಪಿಸಿಎಚ್ ಪ್ಯಾಲೇಸ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನೂತನ ವಧು-ವರರಾದ ನಿಂಗಪ್ಪ ಜೀಗೇರಿ-ರೇಖಾ ಹಾಗೂ ರಾಚಪ್ಪ-ನಿವೇದಿತಾ ಅವರು ಮತದಾನಕ್ಕೆ ಕ್ಷಣಗಣನೇ ಆರಂಭವಾಗಿರುವ ಸಂದರ್ಭದಲ್ಲಿ ಮದುವೆ ಕಾರ್ಯಕ್ರಮದ ಗಡಿಬಿಡಿಯಲ್ಲಿ ಮತದಾನ ಮರೆಯದಂತೆ ಮೇ.10 ರಂದು ತಪ್ಪದೇ ಮತದಾನ ಮಾಡಿ ಎಂಬ ಬರಹಗಳನ್ನು ಪ್ರದರ್ಶಿಸಿ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ. ಮದುವೆಗೆ ಬಂದ ಕುಟುಂಬದವರು, ಬೀಗರು ಸ್ನೇಹಿತರು ಈ ಮಾದರಿ ಮದುವೆಯ ಸಂದೇಶವನ್ನು ಮೆಚ್ಚಿ ಶ್ಲಾಘಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯತ್ ಇಒ ಹನುಮಂತ ಗೌಡ ಪೊಲೀಸ ಪಾಟೀಲ ಅವರು, ಮತದಾನ ಜಾಗೃತಿಯಲ್ಲಿ ನರೇಗಾ ಸಿಬ್ಬಂದಿ, ಗ್ರಾಪಂ ಸಿಬ್ಬಂದಿಯೊಂದಿಗೆ ಪ್ರತಿ ಗ್ರಾಮದಲ್ಲೂ ಮತದಾನ ಜಾಗೃತಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಡೇಕೊಪ್ಪ ಗ್ರಾಮದ ಜೀಗೇರಿ ಕುಟುಂಬದ ಮದುವೆ ಸಮಾರಂಭದಲ್ಲಿ ವಿಶೇಷವಾಗಿ ಮತದಾನ ಜಾಗೃತಿ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.