ಟೆಕ್ಸಾಸ್‌ನ ಶೂಟೌಟ್ ಪ್ರಕರಣ- ಭಾರತೀಯ ಮೂಲದ ಯುವತಿ ಬಲಿ

ವಾಷಿಂಗ್ಟನ್, ಮೇ 9:ಎರಡು ದಿನಗಳ ಹಿಂದೆ ಅಮೆರಿಕದ ಟೆಕ್ಸಾಸ್ ನ ಶಾಪಿಂಗ್ ಮಾಲ್‌ನಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಮೃತಪಟ್ಟ 9 ಮಂದಿಯಲ್ಲಿ ಓರ್ವ ಭಾರತೀಯ ಯುವತಿಯೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಹೈದರಾಬಾದ್ ನ 27 ವರ್ಷದ ಐಶ್ವರ್ಯ ಥಾಟಿಕೊಂಡ ಈ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಟೆಕ್ಸಾಸ್ ನ `ಪರ್ಫೆಕ್ಟ್ ಜನರಲ್ ಕಾಂಟ್ರಾಕ್ಟರ್ಸ್ ಎಲ್ಎಲ್ಸಿ’ ಎಂಬ ಸಂಸ್ಥೆಯಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಆಗಿ ಐಶ್ವರ್ಯ ಕೆಲಸ ಮಾಡುತ್ತಿದ್ದರು ಎಂದು ಮಾಧ್ಯಮ ವರದಿ ಹೇಳಿದೆ.

ಶನಿವಾರ ಗುಂಡಿನ ದಾಳಿ ನಡೆಯುವುದಕ್ಕೆ ಕೆಲ ನಿಮಿಷಗಳ ಮುನ್ನ ಐಶ್ವರ್ಯ ಅವರು ಭಾರತದಲ್ಲಿರುವ ತನ್ನ ಹೆತ್ತವರೊಂದಿಗೆ ಫೋನ್ ನಲ್ಲಿ ಮಾತಾಡಿದ್ದರು. ಗುಂಡಿನ ದಾಳಿಯ ಮಾಹಿತಿ ತಿಳಿದ ಹೆತ್ತವರು ಮತ್ತೆ ಮಗಳಿಗೆ ಫೋನ್ ಕರೆ ಮಾಡಿದಾಗ ಉತ್ತರಿಸಿಲ್ಲ ಎಂದು ವರದಿ ಹೇಳಿದೆ.

ಇನ್ನು ಈ ದಾಳಿಯಲ್ಲಿ ಐಶ್ವರ್ಯ ಅವರ ಭಾರತೀಯ ಸ್ನೇಹಿತ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!