ಕಾಸರಗೋಡು: ತಲೆಮರೆಸಿಕೊಂಡದ್ದ ಆರೋಪಿ ಮೃತದೇಹ ಲಾಡ್ಜ್‌ನಲ್ಲಿ ಪತ್ತೆ
ಕಾಸರಗೋಡು ಮೇ.4 : ಸೈಬರ್ ದಾಳಿಗೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯ ಮೃತದೇಹ ಇಂದು ಕಾಸರಗೋಡಿನ ಲಾಡ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಟ್ಟಾಯಂ ಕೋದನಲ್ಲೂರಿನ ಅರುಣ್ ವಿದ್ಯಾಧರನ್ (32) ಮೃತಪಟ್ಟ ವ್ಯಕ್ತಿ. ಸೈಬರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕೋದನಲ್ಲೂರಿನ ಆದಿರಾ ಮುರಳೀಧರನ್ ( 26)ಎಂಬಾಕೆಯ ಆತ್ಮಹತ್ಯೆ ನಂತರ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ನಡುವೆ ಇದೀಗ ಈತನ ಮೃತದೇಹ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.