ಬಜರಂಗಬಲಿಯನ್ನು ಬಂಧಿಯಾಗಿಸಲು ಕಾಂಗ್ರೆಸ್‌ ನಿರ್ಧರಿಸಿದೆ: ಪ್ರಧಾನಿ ಮೋದಿ

ಬೆಂಗಳೂರು ಎ.2: ದೇಶದ ಈ ಹಳೆಯ ಪಕ್ಷಕ್ಕೆ ಹಿಂದೆ ಶ್ರೀ ರಾಮ ದೇವರೊಂದಿಗೆ ಸಮಸ್ಯೆಯಿದ್ದರೆ ಈಗ ಅವರು ಜೈ ಬಜರಂಗಬಲಿ ಎಂದು ಘೋಷಣೆ ಮೊಳಗಿಸುವವರನ್ನು ಬಂಧಿಯಾಗಿಸಲು ಪಣತೊಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಬಗ್ಗೆ ಹೊಸಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು “ನಾನು ಹನುಮಾನ್‌ ದೇವರ ನಾಡಿಗೆ ನನ್ನ ಗೌರವ ಸಲ್ಲಿಸಲು ಬಂದಿರುವಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯನ್ನು ಬಜರಂಗಬಲಿಯನು ಬಂಧಿಯಾಗಿಸಲು ನಿರ್ಧರಿಸಿದೆ,”. “ಕರ್ನಾಟಕದ ಗೌರವ ಮತ್ತು ಸಂಸ್ಕೃತಿಗೆ ಧಕ್ಕೆ ತರಲು ನಾವು ಯಾರಿಗೂ ಆಸ್ಪದ ನೀಡುವುದಿಲ್ಲ,” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!