ಉಡುಪಿ : ಚಿನ್ನಾಭರಣ ದೋಚುವ ಮಹಿಳಾ ತಂಡದ ಕುರಿತು ಮಣಿಪಾಲ ಪೊಲೀಸರಿಂದ ಸ್ಪಷ್ಟನೆ
ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಚಿನ್ನಾಭರಣ ದೋಚುವ ಮಹಿಳೆಯರ ತಂಡವೊಂದು ಸಕ್ರಿಯವಾಗಿದೆ. ಪಿನಾಯಿಲ್ ಮಾರುವ ನೆಪದಲ್ಲಿ ಚಿನ್ನಾಭರಣ ಕಳವು ಮಾಡುವ ಮಹಿಳೆಯರ ಗುಂಪೊಂದು ಉಡುಪಿಗೆ ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ ಎಂಬ ಸುದ್ದಿಯೊಂದು ಸಮಾಜಿಕ ಜಾಲ ತಾಣದಲ್ಲಿ ಭಾರೀ ಹರಿದಾಡುತ್ತಿದೆ.
ಇದೀಗ ಈ ಬಗ್ಗೆ ಮಾಹಿತಿ ನೀಡಿರುವ ಮಣಿಪಾಲ ಪೊಲೀಸರು. ಇದೊಂದು ಸುಳ್ಳು ಸುದ್ದಿಯೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಕುರಿತು ಪ್ರತಿಕ್ರಿಯೆ ನೀಡಿದ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಅವರು, ನಾವು ಇಂತಹ ಯವುದೇ ಪ್ರಕಟಣೆಯನ್ನು ಕೊಟ್ಟಿಲ್ಲ. ಇದೇ ರೀತಿಯ ಸಂದೇಶ ಆರು ತಿಂಗಳ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಗಲೂ ನಾವು ಕೊಟ್ಟಿಲ್ಲ, ಈಗಲೂ ನಾವು ಪ್ರಕಟಣೆ ಕೊಟ್ಟಿಲ್ಲ. ಇದೊಂದು ಸುಳ್ಳು ಪ್ರಕಟಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಪಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಪಿನಾಯಿಲ್‍ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಸುಮಾರು ಐದರಿಂದ ಆರು ಜನ ಹೆಣ್ಣು ಮಕ್ಕಳ ಗುಂಪೊಂದು ಉಡುಪಿಗೆ ಆಗಮಿಸಿದ್ದು, ಇಂತಹವರು ತಮ್ಮ ಮನೆಯ ಮುಂದೆ ಓಡಾಡಿಕೊಂಡಿದ್ದರೆ ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮಣಿಪಾಲ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ ಎಂಬುದಾಗಿ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.