ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ ಯುವತಿ ರಂಪಾಟ :ಕಪಾಳಮೋಕ್ಷ ಗೈದ ಪಿಎಸ್ಐ

ಮಂಡ್ಯ: ಮಂಡ್ಯದ ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ ಯುವತಿಯೊಬ್ಬಳು ರಂಪಾಟ ಮಾಡಿ ಪಿಎಸ್ ಐ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಘಟನೆ ನಿನ್ನೆ ನಡೆದಿತ್ತು. ಇದೀಗ ಈ ರಂಪಾಟದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ.
ಸವಿತಾಗೌಡ ಪಾಟೀಲ್ ಕಪಾಳ ಮೋಕ್ಷ ಮಾಡಿದ ಪಿಎಸ್ ಐ ಹಾಗೂ ಸಿಬ್ಬಂದಿಗಳು ನೂರಡಿ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರ ದಾಖಲಾತಿ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಸ್ಕೂಟರ್ ನಲ್ಲಿ ಬಂದ ಯುವತಿಯನ್ನ ಕೂಡ ತಡೆದು ದಾಖಲಾತಿ ಪರಿಶೀಲನೆ ಮಾಡಿದರು. ಆಗ ಮಹಿಳೆ ನನ್ ಸ್ಕೂಟರ್ ಅನ್ನು ಯಾಕ್ ಮುಟ್ಟುತ್ತಿದ್ದೀರಾ…?, ಅಲ್ಲದೆ ಸ್ಕೂಟರ್ ಮೇಲೆ ಕುಳಿತು ನನ್ನ ಗಾಡಿ ಯಾಕೆ ಕೊಡ್ಲಿ ಎಂದು ಅವಾಜ್ ಹಾಕಿದ್ದಾಳೆ. ಈ ವೇಳೆ ಮಹಿಳಾ ಪಿಎಸ್ ಐ ಸ್ಕೂಟರ್ ನಿಂದ ಇಳಿಯಮ್ಮ, ನಿನ್ ಹೆಸರೇನು…..? ನಿಮ್ ತಂದೆಯನ್ನು ಠಾಣೆಗೆ ಕರೆಸು, ನೀನು ಬಾ ಎಂದು ಕರೆದರು.

ಆಗ ಯುವತಿ ಹೇ ನನ್ ತಂದೆ ಇಲ್ಲ. ಎಲ್ಲರನ್ನು ಕರೆಸಲಾಗಲ್ಲ ಎಂದು ರಂಪಾಟ ಮಾಡಿದಳು. ಪರಿಣಾಮ ತಾಳ್ಮೆ ಕಳೆದುಕೊಂಡ ಸವಿತಾ ಗೌಡ, ನನ್ನನ್ನೇ ಹೇ ಅಂತೀಯಾ. ಲೋಫರ್… ಏನ್ ಮಾತಾಡ್ತೀಯಾ ಎಂದು ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವೇಳೆ ರಂಪಾಟ ಜೋರಾಗಿ ಕೂಗಾಡಿದ ಯುವತಿ, ಹೇ ಏನು ಯಾರು ನೀನು ನನ್ ಮೇಲೆ ಕೈ ಮಾಡೋಕೆ. ಇದನ್ನ ವೀಡಿಯೋ ಮಾಡ್ಲಾ ಯಾವಳೇ ನೀನು ನನಗೆ ಹೊಡೆಯೋಕೆ ಹೇ ಎಂದು ಯುವತಿ ರೇಗಾಡಿದ್ದಾಳೆ.

ಆಗ ಸವಿತಾ ಅವರು ಯುವತಿಗೆ ಮತ್ತೊಂದು ಏಟು ಕೊಟ್ಟಿದ್ದಾರೆ. ಇದರಿಂದ ಕೆರಳಿದ ಯುವತಿ ಹೇ ಏನೆ ಮಾಡ್ತಿಯಾ ರಾಸ್ಕಲ್ ಎಂದು ಅವಾಜ್ ಹಾಕಿದ್ದಾಳೆ. ಯುವತಿ ರೇಗಾಡುತ್ತಿದ್ದಂತೆಯೇ ಪಿಎಸ್ ಐ ಅವರು, ಠಾಣೆಗೆ ಬಾ ನೀನು ಎಂದು ಸ್ಕೂಟರ್ ತೆಗೆದುಕೊಂಡು ಹೋದರು. ಈ ವೇಳೆ ಮಹಿಳಾ ಪಿಎಸ್ ಐ ಕುರಿತು ಅನ್ ಎಜುಕೇಟೆಡ್ ಬ್ರೂಟ್ ಎಂದು ಯುವತಿ ಬೈದಿದ್ದಾಳೆ.

ಆಗ ಪಿಇಎಸ್‍ಐ ಕೂಡ ನಾನು ಎಜುಕೇಟೆಡ್ ನೀನೇ ಅನ್ ಎಜುಕೇಟೆಡ್ ಎಂದು ಜರಿದರು. ಮತ್ತೆ ನಾನು ಎಜುಕೇಟೆಡ್ ನೀನು ಅನ್ ಎಜುಕೇಟೆಡ್ ರೀತಿ ಬಿಹೇವ್ ಮಾಡಿದ್ದು. ರೂಲ್ಸ್ ಗೊತ್ತಿಲ್ಲ ಪೊಲೀಸ್ ಅಂತೆ ಇವಳು. ವೀಡಿಯೋ ಮಾಡ್ಕೊತ್ತಿದ್ದೀರಾ ತಾನೇ ಮಾಡ್ಕೊಳಿ ಜಾಸ್ತಿ ಮಾತನಾಡಬಾರ್ದು ಎಂದು ಯುವತಿ ಮತ್ತೆ ಅವಾಜ್ ಹಾಕಿದ್ದಾಳೆ. ಇದೀಗ ಈ ಪೊಲೀಸ್ ಮತ್ತು ಯುವತಿಯ ನಡುವಿನ ರಂಪಾಟದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!