ಕುಂದಾಪುರ: ಅನಾರೋಗ್ಯದಿಂದ ಅಸ್ವಸ್ಥಗೊಂಡು ವಕೀಲ ಮೃತ್ಯು

ಕುಂದಾಪುರ ಎ.4(ಉಡುಪಿ ಟೈಮ್ಸ್ ವರದಿ): ಕುಂದಾಪುರ ನ್ಯಾಯಲಯದಲ್ಲಿ ವಕೀಲರಾಗಿದ್ದ  ಜಯಪ್ರಕಾಶ್ ಸಾಲೀನ್ಸ್ ಅವರು ಅನಾರೋಗ್ಯದಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ಜಯಪ್ರಕಾಶ್‌ (53)ರವರು ಕುಂದಾಪುರ ನ್ಯಾಯಲಯದಲ್ಲಿ ವಕೀಲರಾಗಿ ಕೆಲಸ ಮಾಡಿಕೊಡಿದ್ದು, ನಿನ್ನೆ ಕೆಲಸದ ನಿಮಿತ್ತ ಅವರ  ಕಾರಿನಲ್ಲಿ ಉಡುಪಿಗೆ ಹೋರಟಿದ್ದರು.ಈ ವೇಳೆ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಹೂವಿನಕೆರೆ ಬಳಿ ಕಾರಿನಲ್ಲಿ ಕುಳಿತವರು ವಾಂತಿ ಮಾಡಲಾರಂಭಿಸಿದ್ದು ತೀವೃವಾಗಿ  ಅಸ್ವಸ್ಥಗೊಂಡಿದ್ದರು. 

ಕೂಡಲೇ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ  ವೈದ್ಯರು ಜಯಪ್ರಕಾಶ್ ಸಾಲೀನ್ಸ್ ರವರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!