ಶಂಕರನಾರಾಯಣ: ಹಾವು ಕಚ್ಚಿ ಮಹಿಳೆ ಮೃತ್ಯು
ಶಂಕರನಾರಾಯಣ ಎ.3(ಉಡುಪಿ ಟೈಮ್ಸ್ ವರದಿ): ಹೆಬ್ರಿಯ ಬೆಳ್ವೆ ಗ್ರಾಮದಲ್ಲಿ ಹಾಡಿಯಲ್ಲಿ ದರಲೆ ತೆಗೆಯುತ್ತಿದ್ದ ವೇಳೆ ಹಾವು ಕಚ್ಚಿ ಅಸ್ವಸ್ಥ ಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.
ಸ್ಥಳೀಯ ನಿವಾಸಿ ರಾಧ ನಾಯ್ಕ (67) ಮೃತಪಟ್ಟವರು. ಇವರು ಮಾ.11 ರಂದು ಬೆಳ್ವೆ ಗ್ರಾಮದ ಸೂರಜೆಡ್ಡು ಗುಮ್ಮಲ ಎಂಬಲ್ಲಿ ಹಾಡಿಯಲ್ಲಿ ದರಲೆಯನ್ನು ಗುಡಿಸುತ್ತಿರುವಾಗ ಕೈ ಬೆರಳಿಗೆ ವಿಷ ಪೂರಿತವಾದ ಹಾವೊಂದು ಕಚ್ಚಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ನಿನ್ನೆ ಎಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ಕೃಷ್ಣ ಎಂಬವರು ನೀಡಿದ ಮಾಹಿತಿಯಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.