ಮಲ್ಪೆ: ಶಿಪ್ ಯಾರ್ಡ್ ಎದುರು ನಿಲ್ಲಿಸಿದ್ದ ಬೈಕ್ ಕಳವು

ಮಲ್ಪೆ ಎ.3 (ಉಡುಪಿ ಟೈಮ್ಸ್ ವರದಿ): ಇಲ್ಲಿನ‌ ಶಿಪ್ ಯಾರ್ಡ್ ನ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಲೆವೂರಿನ ರಾಂಪುರ ನಿವಾಸಿ ಶ್ರೀಕಾಂತ್ ಆಚಾರ್ಯ  ಮಾ.31 ರಂದು ಬೆಳಿಗ್ಗೆ ತಾವು ಕೆಲಸ ಮಾಡುತ್ತಿದ್ದ ಮಲ್ಪೆ ಟೆಗ್ಮಾ ಶಿಫ್ ಯಾರ್ಡ್‌ ನ ಗೇಟಿನ ಎದುರು ಬೀಗ ಹಾಕಿ ತಮ್ಮ ದ್ವಿಚಕ್ರ ವಾಹನ ನಿಲ್ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ಆದರೆ ಮದ್ಯಾಹ್ನ ಬಂದು ನೋಡಿದಾಗ ಬೈಕ್‌ ಕಾಣದೆ ಇದ್ದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಅದರಂತೆ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕಳವು ಗೈದಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!