ಚೇರ್ಕಾಡಿ:ಸಮೃದ್ಧಿ ಮಹಿಳಾ ಮಂಡಳಿ ವತಿಯಿಂದ ಮಹಿಳೆಯರಿಗಾಗಿ ಕುಣಿತ ಭಜನೆ ತರಬೇತಿ

ಉಡುಪಿ: ಚೇರ್ಕಾಡಿ ಪೇತ್ರಿಯ ಸಮೃದ್ಧಿ ಮಹಿಳಾ ಮಂಡಳಿಯಲ್ಲಿ ಪ್ರಕಾಶ್ ಕುಲಾಲ್ ಅವರ ನೇತೃತ್ವದಲ್ಲಿ ಕಳೆದ 3 ತಿಂಗಳಿನಿಂದ 15 ಮಂದಿಗೆ ಮಹಿಳಾ ಕುಣಿತ ಭಜನೆ ತರಬೇತಿಯು ಯಶಸ್ವಿಯಾಗಿ ನಡೆಯುತ್ತಿದೆ.


 ಇದೀಗ ಮಹಿಳಾ ಕುಣಿತ ಭಜನೆಯಿಂದ ಪ್ರೇರಿತರಾದ 26 ಮಕ್ಕಳ ಕುಣಿತಾ ಭಜನಾ ತಂಡದ ಉದ್ಘಟನಾ ಸಮಾರಂಭ ನಡೆಯಿತು. ಮಕ್ಕಳೆಲ್ಲ ಸೇರಿ ಈ ಭಜನಾ ತಂಡವನ್ನು ಉದ್ಘಾಟಿಸಿದರು. ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾರ್ಯದರ್ಶಿ ಹಾಗೂ ಕುಣಿತ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ ಅವರಿಗೆ ಮಕ್ಕಳು ಸೇರಿ ಸನ್ಮಾನ ಮಾಡಿ ಗೌರವಿಸಿದರು. ಸಮೃದ್ಧಿ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾರ್ಯದರ್ಶಿ ಆಶಾ ಪಾಟೀಲ್, ಕೋಶಾಧಿಕಾರಿ ವನಿತಾ . ಪಿ . ಶೆಟ್ಟಿ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಕ್ಕಳಾದ ಅದಿತಿ ಭಟ್, ನಿಯತಿ, ಸಾಕೇತ್, ಉಷಾ ಸತೀಶ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!