ದೇಗುಲದ ಆವರಣದಲ್ಲಿ ವ್ಯಕ್ತಿ ಆತ್ಮಹತ್ಯೆ :ಒಂದು ವಾರದೊಳಗೆ ಎರಡನೇ ಪ್ರಕರಣ
ಉಡುಪಿ: ದೇಗುಲದ ಆವರಣದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಇತ್ತೀಚಿಗೆ ಸುದ್ದಿಯಾಗಿದ್ದು, ಇದೀಗ ಈ ಘಟನೆ ನಡೆದು ಒಂದು ವಾರದೊಳಗೆ ಇಂತಹದ್ದೆ ಮತ್ತೊಂದು ಘಟನೆ ನಡೆದಿದೆ. ದೇಗುಲದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮತ್ತೊಂದು ಘಟನೆ ಯಲ್ಲಿ ವ್ಯಕ್ತಿಯೊಬ್ಬರು ಉಡುಪಿ ಕೋಟತಟ್ಟು ಪಡುಕರೆಯ ಶಿರಸಿ ಮಾರಿಕಾಂಬ ದೇಗುಲದ ಸಮೀಪದ ಬಾವಿಯ ಹಗ್ಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನಯ್ಯ ಪೂಜಾರಿ (51) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇವರು ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆಯ ಸಮುದ್ರ ಕಿನಾರೆಯಲ್ಲಿ ಬೀಡಾ ಅಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆತ್ಮಹತ್ಯೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಎರಡೂ ಪ್ರಕರಣಗಳು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ವಾರದಲ್ಲಿ ದೇವಸ್ಥಾನದ ಆವರಣದಲ್ಲಿ ಇಂತಹ 2 ಘಟನೆಗಳು ನಡೆದಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದೆ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಳದಲ್ಲಿ ಚಂದ್ರ ಪೂಜಾರಿ ಎಂಬವರು ಆತ್ಮಹತ್ಯೆ ಮಾಡಿ ಕೊಂಡಿದ್ದರು.