ಉಳ್ಳಾಲ ಕಡಲಿಗೆ ಕಸ; ಲಾರಿಯನ್ನು ವಶಕ್ಕೆ ಪಡೆಯುವಂತೆ ಪೌರಾಯುಕ್ತರ ಖಡಕ್ ಸೂಚನೆ
ಮಂಗಳೂರು: ಉಳ್ಳಾಲ ನಗರಸಭೆ ವ್ಯಾಪ್ತಿಯ ಕಡಲಿಗೆ ಕಸವನ್ನು ಸುರಿದಿರುವಂತಹ ಲಾರಿಯನ್ನು ವಶಕ್ಕೆ ಪಡೆಯುವಂತೆ ಉಳ್ಳಾಲ ನಗರಸಭೆ ಪೌರಾಯುಕ್ತರು ಖಡಕ್ ಸೂಚನೆ ನೀಡಿದ್ದಾರೆ. ಉಳ್ಳಾಲ ನಗರದಸಭೆ ವ್ಯಾಪ್ತಿಯಲ್ಲಿ ವಾಹನವೊಂದರಲ್ಲಿ ಬಂದವರು ಒಂದು ಲೋಡ್ ಕಸವನ್ನು ಕಡಲಿಗೆ ಸುರಿದಿದ್ದಾರೆ. ವಾಹನದಲ್ಲಿ ಕಸ ಸುರಿಯುತ್ತಿರುವ ವಿಡಿಯೋವನ್ನು ಇಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಅಲ್ಲದೆ, ಹಾಗೆಯೇ ಈ ಲಾರಿಯಲ್ಲಿ ಒಂದು ಕಂಪನಿಯ ತ್ಯಾಜ್ಯ ವಸ್ತುವನ್ನು ತಂದು ಕಡಲಿಗೆ ಸುರಿಯಲಾಗಿದೆ ಎಂದು ಹೇಳಲಾಗಿದೆ. ನದಿಗಳಿಗೆ ಹಾಗೂ ಕಡಲಿಗೆ ಕಸ ಹಾಕುವವರ ವಿರುದ್ದ ಇತ್ತೀಚೆಗೆ ಎನ್ಜಿಒಗಳು ಅಭಿಯಾನ ಆರಂಭಿಸಿದೆ. ಇದರ ಬೆನ್ನಲ್ಲೇ ಈ ರೀತಿ ಭಾರೀ ಪ್ರಮಾಣದಲ್ಲಿ ಕಸವನ್ನು ತಂದು ಕಡಲಿಗೆ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.