ಗಾಂಧಿ ಜಯಂತಿ: ಕಾಂತಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯಿಂದ ಸಾಧಕರಿಗೆ ಸನ್ಮಾನ

ಕಾಂತಾವರ(ಉಡುಪಿ ಟೈಮ್ಸ್ ವರದಿ) : ಗಾಂಧಿ ಜಯಂತಿಯ ಪ್ರಯುಕ್ತ ಕಾಂತಾವರ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಗ್ರಾಮದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ರೀ ಕಾಂತೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ರಕ್ಷಾ ಕೋಟ್ಯಾನ್ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 96 ಶೇಕಡಾ ಅಂಕ ಗಳಿಸಿ ಅತ್ಯುನ್ನತ ಸಾಧನೆಗೈದಿದ್ದು ಇವರಿಗೆ NSUI ಮೂಲಕ ಕೊಡಲಾಗುವ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮಹತ್ವದ ಯೋಜನೆಯಾದ “ನಮ್ಮೂರ ಹೆಮ್ಮೆ” ಪ್ರಶಂಸಾ ಪತ್ರವನ್ನು ನೀಡಿ ಫಲಪುಷ್ಪಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಗ್ರಾಮದ ಇನ್ನೋರ್ವ ಉದಯೋನ್ಮುಖ ಸಾಧಕ ಪೆನ್ಸಿಲ್‌ ಆರ್ಟ್ ಕಲಾವಿದ “ಸುರೇಶ್ ಬಾರಾಡಿ” ಅವರು ಮಹತ್ಮಾ ಗಾಂಧಿಜಿಯವರ ಪೆನ್ಸಿಲ್ ಆರ್ಟ್ ಚಿತ್ರವನ್ನು ರಚಿಸಿದ್ದು ಅವರ ಈ ಕಲೆಯನ್ನು ಗುರುತಿಸಿ ಸುರೇಶ್ ಬಾರಾಡಿಯವರ ಮನೆಗೆ ತೆರಳಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುರೇಶ್ ಬಾರಾಡಿಯವರು ಚಿತ್ರಿಸಿದ ಗಾಂಧಿಜಿಯ ಚಿತ್ರವನ್ನು ಕಾಂತಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರಾದ ಕುಶ.ಆರ್.ಮೂಲ್ಯ ಭಾಗವಹಿಸಿದರು. ಈ ಸಂದರ್ಭದಲ್ಲಿ ಕಾಂತಾವರ ಗ್ರಾಮೀಣ ಕಾಂಗ್ರೆಸ್ ಮುಖಂಡರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಸಂದೀಪ್ ಅಡ್ಯಂತಾಯ, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಡುಪಿ ಜಿಲ್ಲಾ ಸಂಚಾಲಕರಾದ ಯೋಗೀಶ್ ನಯನ್ ಇನ್ನಾ, ಹಿರಿಯ ಕಾಂಗ್ರೆಸಿಗ ಸಂಜೀವ ಕೋಟ್ಯಾನ್, ಅಮಿತ್ ಪೂಜಾರಿ, ಪ್ರದೀಪ್ ಬೇಲಾಡಿ, ಉದಯ ಶೆಟ್ಟಿ, ಕರಣ್ ಶೆಟ್ಟಿ, ಸಂತೋಷ್ ಕುಲಾಲ್ ಬೇಲಾಡಿ, ದಿನೇಶ್ ಅಮೀನ್, ಸಚಿನ್, ರಕ್ಷಿತ್ ಪೂಜಾರಿ, ಅಶೋಕ್ ಪಲ್ಕೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!