ರಾಹುಲ್ ಅನರ್ಹತೆ: ಗಾಂಧಿ ತತ್ವಕ್ಕೆ ಎಸಗಿದ ದ್ರೋಹ- ರೋ ಖನ್ನಾ
ವಾಷಿಂಗ್ಟನ್ ಮಾ.25 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಭಾರತ ಮೂಲದ ಅಮೆರಿಕದ ಕಾಂಗ್ರೆಸ್ ಸದಸ್ಯ, ಅಮೆರಿಕ ಹೌಸ್ ಆಫ್ ರಪ್ರೆಸೆಂಟೇಟಿವ್ನಲ್ಲಿ ಸಿಲಿಕಾನ್ ವ್ಯಾಲಿಯನ್ನು ಪ್ರತಿನಿಧಿಸುತ್ತಿರುವ
ರೋ ಖನ್ನಾ ಅವರು, ‘ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಹೊರಹಾಕಿರುವುದು ಗಾಂಧಿ ತತ್ವಗಳಿಗೆ ಮತ್ತು ಭಾರತದ ಮೌಲ್ಯಗಳಿಗೆ ಎಸಗಿದ ದೊಡ್ಡ ದ್ರೋಹವಾಗಿದೆ’ ಎಂದು ಹೇಳಿದ್ದಾರೆ. ಹಾಗೂ ‘ನನ್ನ ಅಜ್ಜ (ಮಹಾತ್ಮ ಗಾಂಧಿ) ಹಲವು ವರ್ಷಗಳ ಕಾಲ ಜೈಲಿನಲ್ಲಿ ಇದ್ದದ್ದು, ತ್ಯಾಗ ಮಾಡಿದ್ದು ಇದಕ್ಕಾಗಿ ಅಲ್ಲ’ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿರುವ ಅವರು ‘ಭಾರತೀಯ ಪ್ರಜಾಪ್ರಭುತ್ವದ ಪರವಾಗಿ ನಿರ್ಧಾರ ಹಿಂತೆಗೆದುಕೊಳ್ಳುವ ಶಕ್ತಿ ನಿಮಗೆ ಇದೆ’ ಎಂದು ತಿಳಿಸಿದ್ದಾರೆ.