ಜೆಸಿಐ ಉಡುಪಿ ಇಂದ್ರಾಳಿ ಹಾಗೂ ವಿವಿಧ ಸಂಘಟನೆ ನೇತ್ರತ್ವದಲ್ಲಿ ತುಳು ಲಿಪಿ ಕಲಿಕಾ ಶಿಬಿರ
ಉಡುಪಿ: ಜೆಸಿಐ ಉಡುಪಿ ಇಂದ್ರಾಳಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಉಡುಪಿ ಇವರ ನೇತೃತ್ವದಲ್ಲಿ ಸಂಚಲನ ಟ್ರಸ್ಟ್ ಉಡುಪಿ, ಜೈ ತುಳುನಾಡು ಉಡುಪಿ ಇದರ ಸಹಯೋಗದೊಂದಿಗೆ ಬಲೆ ತುಳು ಲಿಪಿ ಕಲ್ಪುಗ ಅನ್ನುವ ಶೀರ್ಷಿಕೆಯೊಂದಿಗೆ ತುಳು ಲಿಪಿ ಕಲಿಕಾ ಶಿಬಿರವನ್ನು ಆಯೋಜಿಸಲಾಗಿದೆ.
ಉಡುಪಿಯ ಉನ್ನತಿ ಕರಿಯರ್ ಅಕಾಡೆಮಿಯಲ್ಲಿ ಆರಂಭಗೊಂಡಿರುವ ಶಿಬಿರವನ್ನು ತುಳುಕೂಟ ಉಡುಪಿ ಇದರ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತುಳು ಭಾಷೆಯಲ್ಲಿ ಹೆಚ್ಚಾಗಿ ವ್ಯವಹರಿಸುವಂತೆ ಸಲಹೆ ನೀಡಿ, ಸಂಘಟನೆಯ ಪ್ರಯತ್ನವನ್ನು ಶ್ಲಾಘಿಸಿದರು.
ಈ ವೇಳೆ ತುಳು ಸಾಹಿತಿಗಳು ತುಳುವ ನಡಕೆ ಕಾರ್ಯಕ್ರಮ ಸಂಯೋಜಕ ದಯಾನಂದ ಕೆ ಶೆಟ್ಟಿ ಬೆಂದೂರು ಅವರು ಮಾತನಾಡಿ, ತುಳುನಾಡ ಮಣ್ಣಿನ ಮಹಿಮೆ ಅಪಾರ, ತುಳು ಲಿಪಿ ಕಲಿಯುವುದರ ಜೊತೆಗೆ ತುಳುನಾಡ ಭಾಷೆ, ತುಳು ಲಿಪಿಗೆ ಪ್ರಾಧಾನ್ಯತೆ ಬರುವ ಹಾಗೆ ಆಗಬೇಕು ಎಂದು ತಿಳಿಸಿದರು.
ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷೆ ಜೆಸಿ ಜ್ಯೋತಿ ಪ್ರಶಾಂತ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೆಸಿ ಉಡುಪಿ ಇಂದ್ರಾಳಿ ಇದರ ನೇತೃತ್ವದಲ್ಲಿ ಪ್ರಕಟಿಸಲ್ಪಡುವ ಉಡುಪಿ ದೇಗುಲಗಳ ಮಾಹಿತಿಯನ್ನೊಳಗೊಂಡ ಕೈಪಿಡಿಯ ಮುಖಪುಟವನ್ನು ಅನಾವರಣಗೊಳಿಸಲಾಯಿತು.
ಈ ಸಂದರ್ಭ ಸಂಚಲನ ಟ್ರಸ್ಟ್ ರಿಜಿಸ್ಟರ್ ಉಡುಪಿ ಇದರ ಗೌರವ ಅಧ್ಯಕ್ಷ ಪ್ರೇಮ್ ಪ್ರಸಾದ್ ಶೆಟ್ಟಿ, ತುಳು ಲಿಪಿ ಶಿಬಿರದ ಮುಖ್ಯ ಶಿಕ್ಷಕ ವಿಷ್ಣುಮೂರ್ತಿ ಮಂಜಿ ತಾಯ, ಘಟಕದ ಸ್ಥಾಪಕ ಜೆ.ಎಸ್.ಪಿ ಮನೋಜ್ ಕಡಬ, ಸ್ಥಾಪಕಾಧ್ಯಕ್ಷೆ ಜೆ.ಎಸ್.ಎಂ.ಶರ್ಲಿ ಮನೋಜ್, ತುಳು ಲಿಪಿ ಶಿಕ್ಷಕಿ ಸ್ವಾತಿ ಸುವರ್ಣ, ಸುಪ್ರಿಯ ದೇವಾಡಿಗ ಕಾರ್ಯಕ್ರಮದ ಸಂಚಾಲಕರಾದ ಜೆಸಿ. ಅಶೋಕ್ ಶೇರಿಗಾರ್, ಘಟಕದ ಕಾರ್ಯದರ್ಶಿ ಜೆಸಿ ಶಿಲ್ಪ ಶಾನುಭೋಗ ಮೊದಲಾದವರು ಉಪಸ್ಥಿತರಿದ್ದರು.
ಇನ್ನು ಈ ತುಳುಲಿಪಿ ಕಲಿಕಾ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ಘಟಕವನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.