ಯಾದಗಿರಿ: ಮೂಲ ಸೌಕರ್ಯಗಳಿಲ್ಲದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದುರಸ್ಥಿ ಭಾಗ್ಯ
ಯಾದಗಿರಿ(ಉಡುಪಿ ಟೈಮ್ಸ್ ವರದಿ): ಹಲವಾರು ವರ್ಷಗಳಿಂದ ಮೂಲ ಸೌಕರ್ಯಗಳನ್ನೇ ಕಾಣದ ಯಾದಗಿರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮೂಲ ಸೌಕರ್ಯಗಳ ಭಾಗ್ಯ ಒಲಿದು ಬಂದಿದೆ.
ಶಾಲೆಯ ಮೇಲ್ಚಾವಣೆ ಸಂಪೂರ್ಣವಾಗಿ ಹಾಳಾಗಿದ್ದು, ಮಳೆಗಾಲದಲ್ಲಿ ಸೋರುತ್ತಿತ್ತು, ಒನ್ನೊಂದೆಡೆ ವಿದ್ಯುತ್ ಸಂಪರ್ಕ ವಿಲ್ಲದೆ ವಿದ್ಯಾರ್ಥಿಗಳಿ ಕತ್ತಲಲ್ಲಿಯೇ ವಿದ್ಯಾರ್ಜನೆ ಮಾಡಬೇಕಿತ್ತು. ಶಾಲೆಯಲ್ಲಿ ಬಹುಮುಖ್ಯವಾಗಿ ಇರಬೇಕಾದ ಶೌಚಾಯಲದ ವ್ಯವಸ್ಥೆ ಸಂಪೂರ್ಣವಾಗಿ ದುಸ್ಥಿತಿಗೆ ತಲುಪಿದ್ದು ವಿದ್ಯಾರ್ಥಿಗಳು ಬಯಲು ಶೌಚಾಲಯವನ್ನೆ ಅವಲಂಬಿಸಿದ್ದರು. ಇಂತಹ ದುಸ್ಥಿತಿಯಲ್ಲಿದ್ದ ಈ ವಸತಿ ಶಾಲೆಗೆ ಇದೀಗ ದುರಾವಸ್ತೆಯಿಂದ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ.
ಇತ್ತೀಚೆಗೆ ಈ ಶಾಲೆಗೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ ಶಾಲೆಯ ದುಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಿದ ಜಯಪ್ರಕಾಶ್ ಹೆಗ್ಡೆ ಅವರು, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರಿಗೆ ಶಾಲೆಯಲ್ಲಿನ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ಈ ವಿಚಾರ ಬರುತ್ತಿದ್ದಂತೆ ಶೀಘ್ರದಲ್ಲಿಯೇ ಶಾಲೆಯನ್ನು ದುರಸ್ಥಿ ಪಡಿಸುವಂತೆ ಆದೇಶಿಸಿದ್ದರು.
ಮೋಟನಹಳ್ಳಿ ಶಾಲೆಯನ್ನು ಸಂಪೂರ್ಣವಾಗಿ ದುರಸ್ಥಿ ಕಾರ್ಯವನ್ನು ನಡೆಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ , ಇದೀಗ ಹಿರಿಯ ಅಧಿಕಾರಿಗಳ ಸೂಚನೆಯಂತೆ ಸುಮಾರು 240 ವಿದ್ಯಾರ್ಥಿಗಳನ್ನು ಇದೀಗ ತಾತ್ಕಾಲಿಕವಾಗಿ ಸಮೀಪದ ಬಂದಳ್ಳಿಯಲ್ಲಿರುವ ಏಕಲವ್ಯ ಶಾಲೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯರ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಯಾದಗಿರಿ ಜಿಲ್ಲೆಯ ಕರುನಾಡ ಸೇನೆಯ ಜಿಲ್ಲಾ ಸಂಚಾಲಕರಾದ ಕಾಶಿನಾಥ್ ಕಣಿಕಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.