ವೈರಲ್ ಆದ ಉರಿಗೌಡ, ನಂಜೇಗೌಡ ಹೆಸರಿನ ಆಧಾರ ಕಾರ್ಡ್
ಬೆಂಗಳೂರು ಮಾ.20 : ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಹೆಸರು ಉರಿಗೌಡ ಮತ್ತು ನಂಜೇಗೌಡ. ಇದೀಗ ಈ ಹೆಸರಿನ ಆಧಾರ ಕಾರ್ಡ್ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮೋರು ತಂಡ ಉರಿಗೌಡ ನಂಜೇಗೌಡ ಹೆಸರಿನ ಆಧಾರ್ ಕಾರ್ಡ್ ಬಿಡುಗಡೆ ಮಾಡಿದ್ದು, ಅನೇಕ ಸಂಶೋಧನೆ ಬಳಿಕ ಉರಿಗೌಡ ನಂಜೇಗೌಡರ ಆಧಾರ್ ಕಾರ್ಡ್ ಸಿಕ್ಕಿದೆ ಎಂದು ಟೈಟಲ್ ನೀಡಿದ್ದಾರೆ. ಉರಿಗೌಡ, ನಂಜೇಗೌಡ ಆಧಾರ್ ಕಾರ್ಡ್ನಲ್ಲಿ ತಾಯಿ: ಅಶ್ವತ್ಥ ನಾರಾಯಣ, ತಂದೆ: ಸಿಟಿ ರವಿ, ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ, ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರ ಮತ್ತು ಆಧಾರ್ ಸಂಖ್ಯೆ: 420 420 420 420 ಎಂದು ಬರೆಯಲಾಗಿದೆ. ಅಲ್ಲದೆ ಇಬ್ಬರ ಹೆಸರಿನ ಆಧಾರ್ ಕಾರ್ಡ್ ನಂಬರ್ ಕೂಡಾ ಒಂದೇ ಆಗಿದೆ.
ಸದ್ಯ ಈ ಆಧಾರ ಕಾರ್ಡ್ನ ಪೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಮೂಲ ನಾಯಕರು ಉರಿಗೌಡ, ನಂಜೇಗೌಡರ ಚರಿತ್ರೆ ನಿಜ ಎಂದು ಪ್ರತಿಪಾದಿಸಿದರೆ ಕಾಂಗ್ರೆಸ್?ನಿಂದ ಬಿಜೆಪಿ ಸೇರಿದ್ದ ಸಚಿವ ಸುಧಾಕರ್, ಉರಿಗೌಡ, ನಂಜೇಗೌಡ ಗೊತ್ತಿಲ್ಲ, ದೇವೇಗೌಡ, ರಂಗೇಗೌಡ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ. ಆಶ್ವಥ್ ನಾರಾಯಣ್, ಸಿ.ಟಿ.ರವಿ ಬಿಜೆಪಿಗೆ ಅವಮಾನ ಮಾಡಲು ಹೊರಟ್ಟಿದ್ಧಾರೆ. ಇವರು ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ ಎಂದು ಈ ಹಿಂದೆ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿದ್ದಾರೆ.