ಕೋವಿಡ್ ಹೆಚ್ಚಳ: ಆ್ಯಂಟಿಬಯೋಟಿಕ್ ಬಳಕೆ ವಿರುದ್ಧ ಎಚ್ಚರಿಕೆ ನೀಡಿದ ಐಸಿಎಂಆರ್

ಹೊಸದಿಲ್ಲಿ ಮಾ.20 : ದೇಶದಲ್ಲಿ ಮತ್ತೆ ಕೋವಿಡ್ ತಲೆಎತ್ತುತ್ತಿದ್ದು ಮುಂಜಾಗ್ರತಾ ಕ್ರಮಗಳ ಜೊತೆಗೆ ಆ್ಯಟಿಬಯೋಟಿಕ್ ಔಷಧಿಗಳ ಬಳಕೆ ವಿರುದ್ಧ ಭಾರತದ ವೈಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಕೆ ನೀಡಿದೆ.

ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಕಳೆದ ಬಾರಿ ಹೊರಡಿಸಿರುವ ಮಾರ್ಗಚೂಚಿಯನ್ನು ಪರಿಷ್ಕರಿಸಿರುವ  ಐಸಿಎಂಆರ್ ಆ್ಯಟಿಬಯೋಟಿಕ್ ಔಷಧಿಗಳ ಬಳಕೆ ವಿರುದ್ಧ ಹೊಸ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಿದೆ.

ಮಾರ್ಗಸೂಚಿಯಲ್ಲಿ ಉಸಿರಾಟಕ್ಕೆ ಕಷ್ಟವಾದಲ್ಲಿ, ಅಧಿಕ ಜ್ವರ ಅಥವಾ ತೀವ್ರ ಕಫ, ವಿಶೇಷವಾಗಿ ಐದು ದಿನಗಳಿಂತ ಹೆಚ್ಚು ಕಾಲ ಮಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಅತ್ಯಧಿಕ ಅಪಾಯ ಸಾಧ್ಯತೆಯ ಲಕ್ಷಣಗಳಿರುವ ವ್ಯಕ್ತಿಗಳಿಗೆ ಕಡಿಮೆ ಮಿತಿಯನ್ನು ನಿಗದಿಪಡಿಸಬೇಕು” ಎಂದು ಸೂಚಿಸಿದೆ. ತೀವ್ರಗತಿಯಲ್ಲಿ ಏರಿಕೆಯಾಗುವ ಸೌಮ್ಯ ಅಥವಾ ತೀವ್ರತರ ರೋಗಗಳಲ್ಲಿ ರೆಮ್‌ಡೆಸಿವಿರ್ ಅನ್ನು ಐದು ದಿನಗಳ ಕಾಲ ತೆಗೆದುಕಳ್ಳಬೇಕು (ಒಂದನೇ ದಿನ 200 ಎಂಜಿ 4 ಮತ್ತು ಉಳಿದ ನಾಲ್ಕು ದಿನಗಳಲ್ಲಿ 100 ಎಂಜಿ 4 ಓಡಿ) ಎಂದು ತಿಳಿಸಲಾಗಿದೆ.

“ಮಾರ್ಗಸೂಚಿಯು ಲೊಪಿನವೀರ್-ರಿಟೊನವೀರ್, ಎಚ್‌ಸಿಕ್ಯೂ, ಇವೆರ್‌ಮೆಟಿಸಿನ್, ಕೊನ್ವಲೆಸೆಂಟ್ ಪ್ಲಾಸ್ಮಾ, ಮೊಲ್ನುಪಿರವಿರ್, ಫವಿಪಿರವಿರ್, ಅಝಿತ್ರೊಮೈಸಿನ್, ಡಾಕ್ಸಿಸಿಲಿನ್ ಔಷಧಿ ಬಳಕೆ ಮಾಡದಿರಲು ಮಾರ್ಗಸೂಚಿ ಸಲಹೆ ಮಾಡುತ್ತದೆ” ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.

ಶಂಕಿತ ಬ್ಯಾಕ್ಟೀರಿಯಾ ಸೋಂಕಿನ ಬಗ್ಗೆ ಕ್ಲಿನಿಕಲ್ ಪರೀಕ್ಷೆಯಲ್ಲಿ ತಿಳಿದು ಬಾರದ ಸಂದರ್ಭದಲ್ಲಿ ಆ್ಯಂಟಿಬಯೋಟಿಕ್ಸ್ ಬಳಕೆ ಬೇಡ. ಕೋವಿಡ್-19 ಸೋಂಕಿನ ಜತೆಗೆ ಇತರ ಸಹ ಸೋಂಕುಗಳ ಸಾಧ್ಯತೆ ಬಗ್ಗೆ ಕೂಡಾ ಗಂಭೀರವಾಗಿ ಪರಿಗಣಿಸಬೇಕು. ಸೌಮ್ಯ ಪ್ರಮಾಣದ ರೋಗಗಳಲ್ಲಿ ವ್ಯವಸ್ಥಿತ ಕಾರ್ಟಿಕೊಸ್ಟಿರಾಯ್ಡ್ ಕಂಡುಬರುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!