ಮಣಿಪಾಲ: ಮಾದಕ ವಸ್ತು ಸೇವನೆ-ಯುವಕ ಪೊಲೀಸ್ ವಶಕ್ಕೆ

ಮಣಿಪಾಲ ಮಾ.18 (ಉಡುಪಿ ಟೈಮ್ಸ್ ವರದಿ) : ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲದ ಶಿವಳ್ಳಿ ಗ್ರಾಮದ ಲಾಡ್ಜ್ ವೊಂದರ ಸಮೀಪ ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಫನ್ (26) ಎಂಬಾತನನ್ನು ಮಾದಕ ವಸ್ತು ಸೇವಿಸಿರುವ ಅನುಮಾದ ಮೇರೆಗೆ ವಶಕ್ಕೆ ಪಡೆದು ಪೊಲೀಸರು ಮಣಿಪಾಲದ ಫಾರೆನ್ಸಿಕ್ ವಿಭಾಗದ ವೈದ್ಯರ ಬಳಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈತನ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!