ಉಡುಪಿ: ಕಲ್ಯಾಣಪುರದ ಮಿಲಾಗ್ರೀಸ್ ಕಾಲೇಜ್‍ಗೆ ನ್ಯಾಕ್ ನಿಂದ ಬಿ++ ಮಾನ್ಯತೆ

ಉಡುಪಿ ಮಾ.18 (ಉಡುಪಿ ಟೈಮ್ಸ್ ವರದಿ): ಕಲ್ಯಾಣಪುರದ ಮಿಲಾಗ್ರೀಸ್ ಕಾಲೇಜಿಗೆ ನ್ಯಾಶನಲ್ ಅಕ್ರೆಡಿಟೇಶನ್ ಮತ್ತು ಅಸೆಸ್‍ಮೆಂಟ್ ಕೌನ್ಸಿಲ್ (NAAC) ನಿಂದ ಬಿ++ ಮಾನ್ಯತೆ ಲಭಿಸಿದೆ.

ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಪ್ರೊ. ವೈಸ್ ಚಾನ್ಸಲರ್ ಡಾ ಸುಮಿತ್ರಾ ಕುಕ್ರೇಟಿ ಅವರು ಪೀರ್ ತಂಡದ ಅಧ್ಯಕ್ಷರಾಗಿದ್ದರು. ಹಾಗೂ ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯ ಪ್ರೊ.ಡಾ ಹವಾ ಸಿಂಗ್, ಗೋವಾದ ಕ್ವಿಪೆಮ್ ಸರ್ಕಾರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ ಜೋಯ್ದೀಪ್ ಭಟ್ಟಾಚಾರ್ಯ ಅವರು ಸದಸ್ಯರಾಗಿದ್ದರು.

Leave a Reply

Your email address will not be published. Required fields are marked *

error: Content is protected !!